ESIC Recruitment : ಉದ್ಯೋಗಾವಕಾಶ: 92 ಸಾವಿರದ ವರೆಗೆ ಮಾಸಿಕ ವೇತನ: PUC, Diploma ಆದವರು ಅರ್ಜಿ ಸಲ್ಲಿಸಿ
ಅಕ್ಟೋಬರ್ 30, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣಾವಕಾಶ. ಉದ್ಯೋಗಿಗಳ ರಾಜ್ಯ ವಿಮಾ ನಿಮಗದಲ್ಲಿ 57 ಹುದ್ದೆಗಳು ( ESIC Recruitment ) ಖಾಲಿಯಿದ್ದು, ಇವುಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಿಯುಸಿ, ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಕೃತ ಅಧಿಸೂಚನೆಯ ಪ್ರಕಾರ ಮಾಸಿಕ ವೇತನ ವಿವಿಧ ಹುದ್ದೆಗಳಿಗೆ ಅನುಗುಣವಾಗಿ 19 ಸಾವಿರದಿಂದ 92 ಸಾವಿರದ ವರೆಗೆ ನಿಗದಿಯಾಗಿದೆ.
ಅಕ್ಟೋಬರ್ 1, 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 30, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ( ESIC Recruitment ) ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಡೆಂಟಲ್ ಮೆಕ್ಯಾನಿಕ್ ವಿಭಾಗದಲ್ಲಿ ಏಳು ಹುದ್ದೆಗಳು ಖಾಲಿಯಿದ್ದು, 12ನೇ ತರಗತಿ , ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಎಂಟು ಇಸಿಜಿ ತಂತ್ರಜ್ಞ ಹುದ್ದೆಗಳಿದ್ದು, 12ನೇ ತರಗತಿ , ಡಿಪ್ಲೊಮಾ ವಿದ್ಯಾರ್ಹತೆ ನಿಗದಿಯಾಗಿದೆ. ಜೂನಿಯರ್ ರೇಡಿಯೋಗ್ರಾಫರ್ ಹುದ್ದೆಗಳಿಗೂ 12ನೇ ತರಗತಿ , ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಬಹುದಾಗಿದ್ದು, 11 ಹುದ್ದೆಗಳಿವೆ.
ಇನ್ನು ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ 13 ಹುದ್ದೆಗಳಿದ್ದು, 12ನೇ ತರಗತಿ , ಡಿಪ್ಲೊಮಾ ಆದವರು, ರೇಡಿಯೋಗ್ರಾಫರ್ ವಿಭಾಗದಲ್ಲಿ 5 ಹುದ್ದೆಗಳಿದ್ದು, 12ನೇ ತರಗತಿ , ಡಿಪ್ಲೊಮಾ ಆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವೈದ್ಯಕೀಯ ದಾಖಲೆ ಸಹಾಯಕ ಇದಕ್ಕೆ ಒಂದೇ ಹುದ್ದೆ ಖಾಲಿಯಿದ್ದು, ಪಿಯುಸಿ ವಿದ್ಯಾರ್ಹತೆ ನಿಗದಿಯಾಗಿದೆ. ಫಾರ್ಮಸಿಸ್ಟ್ ವಿಭಾಗದಲ್ಲಿ ಒಟ್ಟು 5 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, 12ನೇ, ಡಿಪ್ಲೊಮಾ- ಫಾರ್ಮಸಿಯಲ್ಲಿ ಪದವಿ ಪಡೆದವರು Apply ಮಾಡಬಹುದಾಗಿದೆ.
ಹುದ್ದೆಗಳು | ಮಾಸಿಕ ವೇತನ ವಿವರ |
ಜೂನಿಯರ್ ರೇಡಿಯೋಗ್ರಾಫರ್ | 21,700- 69,100 |
ಡೆಂಟಲ್ ಮೆಕ್ಯಾನಿಕ್ | 29,200- 92,300 |
ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ | 29,200- 92,300 |
ಇಸಿಜಿ ತಂತ್ರಜ್ಞ | 25,500-81,100 |
ವೈದ್ಯಕೀಯ ದಾಖಲೆ ಸಹಾಯಕ | 19,900- 63,200 |
ರೇಡಿಯೋಗ್ರಾಫರ್ | 29,200- 92,300 |
ಫಾರ್ಮಾಸಿಸ್ಟ್ | 29,200- 92,300 |
ಸಮಾಜ ಸೇವಕ/ ಸಾಮಾಜಿಕ ಮಾರ್ಗದರ್ಶಿ | 25,500 – 69,100 |
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಲಿಖಿತ ಪರೀಕ್ಷೆ, ಟೈಪಿಂಗ್-ಡೇಟಾ ಎಂಟ್ರಿ ಟೆಸ್ಟ್ ಹಾಗು ಸಂದರ್ಶನದ ಮೂಲಕ ನೇಮಕಾಗಿ ನಡೆಯಲಿದೆ. ಅರ್ಜಿ ಸಲ್ಲಿಸುವ ವಿಧಾನ, ಅಧಿಸೂಚನೆ ಮತ್ತು ಅಧಿಕೃತ ವೆಬ್‌ಸೈಟಿನ ವಿವರ ನೀಡಲಾಗಿದ್ದು, ಆಸಕ್ತರು ಇದನ್ನು ಓದಿಕೊಂಡು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು | ಉದ್ಯೋಗಿಗಳ ರಾಜ್ಯ ವಿಮಾ ನಿಗಮ |
ಉದ್ಯೋಗ ಸ್ಥಳ | ಕರ್ನಾಟಕ |
ಹುದ್ದೆಗಳ ಸಂಖ್ಯೆ | 57 |
ಅಧಿಕೃತ ಅಧಿಸೂಚನೆ ಓದಲು | ಇಲ್ಲಿ ಕ್ಲಿಕ್ ಮಾಡಿ. |
ಅರ್ಜಿ ಸಲ್ಲಿಕೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ. |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ. |
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್