ಸ್ವಚ್ಚತಾ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಗೌರವ: ಗಾಂಧಿ ಜಯಂತಿ ಹಿನ್ನಲೆಯಲ್ಲಿ ಆಯೋಜನೆ

ಹೊನ್ನಾವರ: ದಿವಂಗತ ಡಿ. ದೇವರಾಜ ಅರಸು ವಿಚಾರ ವೇದಿಕೆ ಉತ್ತರ ಕನ್ನಡ ವತಿಯಿಂದ ಹೊನ್ನಾವರ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಚತಾ ಸಿಬ್ಬಂದಿಗಳಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರ ಸೇವೆಯನ್ನು ಪರಿಗಣಿಸಿ ಗೌರವ ಸಮರ್ಪಿಸಲಾಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನಿವೇದಿತ್ ಆಳ್ವಾ ನೆರವೇರಿಸಿದರು. ಬಳಿಕ ಮಾತನಾಡಿ ಅರಸುರವರು ಅಭಿವೃದ್ದ ಪರವಾಗಿದ್ದವರು. ತಮ್ಮ ತಾಯಿ ಮರ್ಗರೇಟ್ ಆಳ್ವಾರವರು ರಾಜ್ಯಸಭೆಗ ಹೋಗಲು ಅರಸುರವರೆ ಕಾರಣ.ಹಿಂದುಳಿದ ವರ್ಗದವರನ್ನು ಮುನ್ನೆಲೆಗೆ ತರಬೇಕೆನ್ನುವ ವಿಚಾರಧಾರೆ ಹೊಂದಿ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರು ಎಂದರು.

ಸಾಹಿತಿ, ಡಾಕ್ಟರ್ ಶ್ರೀಪಾದ ಶೆಟ್ಟಿ ಮಾತನಾಡಿ, ಹಿಂದುಳಿದ ವರ್ಗದವರಿಂದ ಬಂದ ಅರಸುರವರು ಸಾಮಾಜಿಕ ಕ್ರಾಂತಿ ಸೃಷ್ಠಿಸಿದವರು. ಅವರ ಆಶಯ,ಆದರ್ಶ,ನಡೆನುಡಿ ಹೀಗೆ ಮುಂದುವರೆಯಲಿ.ಸ್ವಚ್ಚತೆಯೊAದಿಗೆ ನಮ್ಮ ಆದರ್ಶಗಳನ್ನು ಬೆಳೆಸಿಕೊಳ್ಳೊಣ ಎಂದರು ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಚತಾ ಸಿಬ್ಬಂದಿಗಳಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಡಿ.ದೇವರಾಜ ಅರಸು ವಿಚಾರ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾಕ್ಟರ ರಾಜೇಶ್ ಕಿಣಿ ಮಾತನಾಡಿ, ಇಲ್ಲಿನ ವೈದ್ಯರು,ಸಿಬ್ಬಂದಿಗಳ ಸಹಕಾರದಿಂದ ಉತ್ತಮ ಸೇವೆ ನೀಡಲಾಗುತ್ತಿದೆ.ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಸೌಲಭ್ಯವನ್ನು ಒದಗಿಸುತ್ತಿದ್ದೇವೆ ಎಂದರು. ಆಸ್ಪತ್ರೆಗೆ ಬರುವ ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಆಸ್ಪತ್ರೆಯ ಎರಡನೇ ಮಹಡಿಗೆ ಬರಬೇಕಾಗುತ್ತದೆ. ಇಂತಹ ರೋಗಿಗಳ ಪರಿಸ್ಥಿತಿ ಕಷ್ಟಕರವಾಗಿರುತ್ತದೆ, ಆದ್ದರಿಂದ ಲಿಪ್ಟ್ ಅವಶ್ಯತಕೆ ಇರುತ್ತದೆ. ಈ ಬಗ್ಗೆ ನಿವೇದಿತ್ ಆಳ್ವರವರಲ್ಲಿ ವಿಷಯ ಪ್ರಸ್ತಾಪಿಸಿದಾಗ 15 ಲಕ್ಷ ಮೊತ್ತದ ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.ಅವರಿಗೆ ರೋಗಿಗಳ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ವೇದಿಕೆಯಲ್ಲಿ ದಿವಂಗತ ಡಿ. ದೇವರಾಜ ಅರಸು ವಿಚಾರ ವೇದಿಕೆ ಜಿಲ್ಲಾ ಅಧ್ಯಕ್ಷ ಅನಂತ ನಾಯ್ಕ, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಸತೀಶ್ ನಾಯ್ಕ, ಡಾಕ್ಟರ ಪ್ರಕಾಶ ನಾಯ್ಕ, ಡಾಕ್ಟರ್ ಕೃಷ್ಣಾ.ಜಿ, ಡಾಕ್ಟರ ಅನುರಾಧ ಪಟಗಾರ್, ಸಾಹಿತಿ ಎಸ್.ಡಿ ಹೆಗಡೆ, ಶಂಕರ ಗೌಡ ಗುಣವಂವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು,ಸ್ವಚ್ಚತಾ ಸಿಬ್ಬಂದಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version