Follow Us On

WhatsApp Group
Focus News
Trending

Kumta: ಕುಮಟಾದಲ್ಲಿ ಖಾದಿಮೇಳ: ಅಕ್ಟೋಬರ್ 5ರ ವರೆಗೆ ಆಯೋಜನೆ

ಕುಮಟಾ (Kumta): ಅಕ್ಟೋಬರ್ 2 ಗಾಂಧಿ ಜಯಂತಿ ಹಾಗೂ ಲಾಲ್‌ಬಹದ್ದೂರ್ ಶಾಸ್ತಿç ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಕುಮಟಾ ಬಿ.ಜೆ.ಪಿ ಮಂಡಲದ ವತಿಯಿಂದ ಕುಮಟಾ ಬಿ.ಜೆ.ಪಿ ಕಾರ್ಯಾಲಯದಲ್ಲಿ ಖಾದಿಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಇಂದಿನಿoದ ಅಕ್ಟೋಬರ್ 5 ರ ವರೆಗೆ ಖಾಧಿ ಮೇಳವು ಇರಲಿದೆ. ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು, ದೇಶಿಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೆಕೆಂಬ ಸದುದ್ದೇಶದಿಂದ ಭಾರತೀಯ ಜನತಾ ಪಾರ್ಟಿಯು ಪ್ರತಿ ವರ್ಷ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

ಕುಮಟಾ (Kumta) ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಈ ಒಂದು ಖಾದಿ ಮೇಳದ ಉದ್ಘಾಟನೆಯನ್ನು ನೆರವೇರಿಸಿದರು. ಈ ವೇಳೆ ಹಾಜರಿದ್ದ ಗಣ್ಯರೆಲ್ಲರೂ ಒಗ್ಗೂಡಿ ಗಾಂಧಿಜಿಯವರ ಹಾಗೂ ಲಾಲ್‌ಬಹದ್ದೂರ್ ಶಾಸ್ತಿç ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಶಾಸಕರು, ಕಳೆದ ವರ್ಷವೂ ಸಹ ನಮ್ಮ ಪಕ್ಷದ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ನಮ್ಮ ಪಕ್ಷದ ವತಿಯಿಂದ ಕುಮಟಾ ಮಂಡಲದ ಕಚೇರಿಯಲ್ಲಿ ಖಾಧಿ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ವರ್ಷ ಖಾದಿ ಮೇಳವು ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಅದೇ ರೀತಿ ಈ ವರ್ಷವೂ ಕೂಡ ಖಾದಿ ಮೇಳವನ್ನು ಆಯೋಜಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಅವರು ಮಾತನಾಡಿ, ಖಾದಿ ನಮ್ಮ ದೇಶದ ಅಸ್ಮಿತೆಯಾಗಿದ್ದು, ಈ ಒಂದು ಖಾದಿಗೆ ಎಲ್ಲಾ ಜನರನ್ನು ಒಗ್ಗೂಡಿಸುವ ವಿಶೇಷವಾದ ಶಕ್ತಿಯಿದೆ. ಖಾದಿಯು ಆತ್ಮ ನಿರ್ಭತೆಯ ಸಂಕೇತವಾಗಿದೆ ಎಂದರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ಡಾ. ಜಿ.ಜಿ ಹೆಗಡೆ, ಎಮ್.ಜಿ ಭಟ್, ಮಂಡಲಾಧ್ಯಕ್ಷರಾದ ಹೇಮಂತ ಗಾಂವಕರ್, ಗಜಾನನ ಗುನಗಾ ಮುಂತಾದವರು ಸೇರಿದಂತೆ ಇನ್ನಿತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button