Important
Trending

Accident: ಕಾರು ಡಿಕ್ಕಿಹೊಡೆದು ಮಹಿಳೆ ಸಾವು

ಕುಮಟಾ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಹೊಡೆದು, ಗಂಭೀರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿರುವ ಘಟನೆ ಧಾರೇಶ್ವರದ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆದಿದೆ. ಗಿರಿಜಾ ನಾರಾಯಣ ಅಂಬಿಗ ಮೃತ ಮಹಿಳೆ. ಅತಿವೇಗದಿಂದ ಕಾರು ಚಲಾಯಿಸಿಕೊಂಡು ಬಂದು ಮಹಿಳೆ ಸಾವಿಗೆ ಕಾರಣವಾದ ತೆಲಂಗಾಣ ಮೂಲದ ದೀಪಕ್ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಇಟ್ಟಿದ್ದ ಮೂರು ಅಡಿಕೆ ಚೀಲ ಕಳ್ಳತನ

ಯಲ್ಲಾಪುರ: ಮನೆಯಲ್ಲಿ ಕೂಡಿಟ್ಟಿದ್ದ ಮೂರು ಅಡಿಕೆ ಚೀಲವನ್ನು ಕಳ್ಳರು ಕದ್ದೊಯ್ದ ಘಟನೆ ಜೋಗದ ಮನೆಯಲ್ಲಿ ನಡೆದಿದೆ. ಸುಮಾರು 55 ಸಾವಿರ ಮೌಲ್ಯದ ಅಡಿಕೆ ಕಳ್ಳತನ ಆಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃಷಿಕ ಗೋಪಾಲಕೃಷ್ಣ ದತ್ತಾತ್ರೇಯ ಹೆಬ್ಬಾರ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ: ಬೈಕ್ ಸವಾರ ಗಂಭೀರವಾಗಿ ಗಾಯ

ಶಿರಸಿ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಓಣಿಗದ್ದೆ ಸಮೀಪ ನಡೆದಿದೆ. ದೇವನಗದ್ದೆಯ ಗೋಪಾಲ ಬೆಳ್ಳಾ ಗೌಡ ಗಾಯಗೊಂಡ ಬೈಕ್ ಸವಾರ ಎಂದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಿರ್ಲಕ್ಷö್ಯದಿಂದ ಬಸ್ ಚಾಲಯಿಸಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಘಟನೆಯಲ್ಲಿ ಬೈಕ್ ಸಂಪೂರ್ಣ ಜಖಂಗೊAಡಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button