Job News
Trending

Mega Job Fair 2023: ಪ್ರತಿಷ್ಠಿತ 200ಕ್ಕೂ ಹೆಚ್ಚು ಕಂಪನಿಗಳು ಭಾಗಿ: ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ

ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅಕ್ಟೋಬರ್ 5 ರಿಂದ 7ರ ವರೆಗೂ ವಸತಿ ವ್ಯವಸ್ಥೆ

Telegram Group Join Now

ಕಾರವಾರ: ಆಳ್ವಾಸ್ ಶಿಕ್ಷಣ ಪತಿಷ್ಠಾನದವತಿಯಿಂದ ಮೂಡಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ಅಕ್ಟೋಬರ್ 06 ಮತ್ತು 07 ರಂದು `ಆಳ್ವಾಸ್ ಪ್ರಗತಿ-2023′ ಬೃಹತ್ ಉದ್ಯೋಗ ಮೇಳ (Mega Job Fair 2023) ಆಯೋಜಿಸಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 13ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಇದಾಗಿದೆ. ಈವರೆಗೆ 182 ಕಂಪೆನಿಗಳು ನೋಂದಾಯಿಸಿಕೊoಡಿದ್ದು, 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಉದ್ಯೋಗಾವಕಾಶ: 92 ಸಾವಿರದ ವರೆಗೆ ಮಾಸಿಕ ವೇತನ: PUC, Diploma ಆದವರು ಅರ್ಜಿ ಸಲ್ಲಿಸಿ: ಅಕ್ಟೋಬರ್ 30, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಐಸಿಐಸಿಐ, ಆಕ್ಸಿಸ್, ಉಜ್ಜೀವನ್ ಫೈನಾನ್ಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್‌ಗಳು ಭಾಗವಹಿಸಲಿವೆ.
ಅಲ್ಲದೆ ಏಸ್ಡಿಸೈನರ್, ವೋಲ್ವೊ, ಸನ್ಸೆರಾ ಎಂಜಿನಿಯರಿoಗ್ ಲಿಮಿಟೆಡ್, ಫೌರೆಸಿಯಾ ಎಮಿಷನ್ಸ್ ಕಂಟ್ರೋಲ್ ಟೆಕ್ನಾಲಜೀಸ್ ಇಂಡಿಯಾ, ಮೈನಿ ಪ್ರಿಸಿಷನ್ ಇಂಡಿಯಾ , ಸ್ವಿಚ್ಗೇರ್ ಆಂಡ್ ಕಂಟ್ರೋಲ್ ಟೆಕ್ನಿಕ್ಸ್ ಸುಮಾರು 200ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳಲಿವೆ. ಐಟಿಐ, ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಇನ್ನೂ ಕಡಿಮೆ ವಿದ್ಯಾಭ್ಯಾಸದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ಆನ್ಲೈನ್ ನೋಂದಣಿ ಕಡ್ಡಾಯವಾಗಿದೆ.

ಮೈಸೂರು ಪ್ರದೇಶದ ಕೈಯನ್ಸ್ ಟೆಕ್ನಾಲಜಿ ವೃತ್ ಎಲೆಕ್ಟ್ರಾನಿಕ್ಸ್, ಟಿವಿಎಸ್ ಮೋಟರ್ಸ್, ಪ್ಲಾನ್ಟೆಕ್ ಮತ್ತಿತರ ಕಂಪೆನಿಗಳು ಈ ಬಾರಿಯ ‘ಪ್ರಗತಿ’ಯಲ್ಲಿ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಿವೆ. ಉತ್ಪಾದನಾ ವಲಯವು ಬಿ.ಕಾಂ. ಹಾಗೂ ಇತರೆ ಪದವೀಧರರಿಗೆ ಹಲವಾರು ಉದ್ಯೋಗಾವಕಾಶ ನೀಡುವುದಲ್ಲದೇ, ಇತರ ವಲಯಗಳಲ್ಲಿಯೂ ಔದ್ಯೋಗಿಕ ಬೇಡಿಕೆ ಇದೆ. ಐಟಿ ಉದ್ಯೋಗದಾತರಾದ ಇನ್ಫಾರ್ಮೆಟಿಕಾ, ಅಮೆಜಾನ್, ವಿನ್ಮನ್ ಸಾಫ್ಟ್ವೇರ್ ಹಾಗೂ ಐಟಿಇಎಸ್ ಕ್ಷೇತ್ರದ ಪ್ರತಿಷ್ಟಿತ ಕಂಪೆನಿಗಳಾದ 24×7, ದಿಯಾ ಸಿಸ್ಟ್ಮ್ಸ್, ಸೆಜಿಲಿಟಿ, ಕೊನ್ಸೆಂಟ್ರಿಕ್ಸ್ ಅಲ್ಲದೆ ವಿವಿಧ ಮಾಧ್ಯಮ ಸಂಸ್ಥೆಗಳು ಕೂಡ ಈ ಮೇಳದಲ್ಲಿ ಭಾಗವಹಿಸುತ್ತಿವೆ.

ಕಂಪೆನಿ ಹಾಗೂ ಸಂಸ್ಥೆಗಳು ನೇಮಕಾತಿ ಮೂಲಕ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವೀಧಗಳಾದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ (ಪ್ಯಾರಾಮೆಡಿಕಲ್), ಎಂಜಿನಿಯರಿoಗ್, ಕಲಾ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ(ಮ್ಯಾನೇಜ್ಮೆಂಟ್), ಮೂಲ ವಿಜ್ಞಾನ (ಬೇಸಿಕ್ ಸೈನ್ಸ್), ಶೂಶ್ರುಷೆ (ನರ್ಸಿಂಗ್), ಐಟಿಐ, ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ಮತ್ತು ಇತರ ಅರ್ಹ ಪ್ರತಿಭಾವಂತರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಉದ್ಯೋಗ ಮೇಳದ ಸ್ಥಳಮೂಡಬಿದರೆ
ದಿನಾಂಕಅಕ್ಟೋಬರ್ 6 ಮತ್ತು 7
ಉಚಿತ ನೊಂದಣಿಗಾಗಿಇಲ್ಲಿ ಕ್ಲಿಕ್ ಮಾಡಿ
ಆಳ್ವಾಸ್ ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ

(Mega Job Fair 2023) ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್ಸೈಟ್ www.alvaspragati.com ನಲ್ಲಿ ಪ್ರಕಟಿಸಲಾಗುವುದು. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಉಚಿತ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು. ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅಕ್ಟೋಬರ್ 5 ರಿಂದ 7ರವರೆಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸoದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button