ಪತಿಯನ್ನು ಕೊಲೆ ಮಾಡಲು ಸಿನಿಮಾ ಶೈಲಿಯ ಯೋಜನೆ ರೂಪಿಸಿದ ಪತ್ನಿ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ
48 ಗಂಟೆಯಲ್ಲೇ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು: ನಾಲ್ವರು ಆರೋಪಿಗಳ ಬಂಧನ
ಕುಮಟಾ: ಅಕ್ರಮ ಸಂಬoಧಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಪ್ರಕರಣ ದಾಖಲಾದ ಕೇವಲ 48 ಗಂಟೆಯಲ್ಲೇ ಕೊಲೆ ಪ್ರಕರಣವನ್ನು ಬೇಧಿಸಿದ ಕುಮಟಾ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ತಾಲೂಕಿನ ಗಡಿ ಭಾಗದ ದೇವಿಮನೆ ಘಟ್ಟವು ಕೊಲೆಗೆಡುಕರ ಹಾಟ್‌ಸ್ಪಾಟ್ ಆಗಿ ಮಾರ್ಪಾಡಾಗಿದ್ದು, ಈಗಾಗಲೇ ಅನೇಕ ಕೊಲೆ ಪ್ರಕರಣಗಳು ಈ ಭಾಗದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ದೇವಿಮನೆ ಘಟ್ಟದ ದೇವಸ್ಥಾನದ ಹಿಂಬಾಗದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಕುರಿತಾಗಿ ಕುಮಟಾ ಪಿ.ಎಸ್.ಐ ನವೀನ ನಾಯ್ಕ ಅವರ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಕುಮಟಾ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಗದಗ ಮತ್ತು ಬಾಗಲಕೋಟೆ ಮೂಲದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿನಿಮೀಯ ರೀತಿಯಲ್ಲಿ ಕೊಲೆಗೈಯುವ ಯೋಜನೆ
ಕೊಲೆಯಾದ ವ್ಯಕ್ತಿ ಬಾಗಲಕೋಟೆ ಮೂಲದ ಬಶೀರ್ ಸಾಬ್ ಎಂದು ತಿಳಿದುಬಂದಿದ್ದು, ಅಕ್ರಮ ಸಂಬoಧ ಹೊಂದಿದ್ದ ಪತ್ನಿಯೆ ಪತಿಯನ್ನು ಕೊಲೆ ಮಾಡಿಸಿರುವುದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ರಜಮಾ, ತಾನು ಅಕ್ರಮ ಸಂಬoಧ ಹೊಂದಿದ್ದ ಪರಶುರಾಮನಿಗೆ ಹಣ ನೀಡಿ ಸಿನಿಮೀಯ ರೀತಿಯಲ್ಲಿ ಕೊಲೆಗೈಯುವ ಯೋಜನೆ ರೂಪಿಸಿದ್ದರು.
ಸೆಪ್ಟೆಂಬರ್ 30 ರಂದು ಮಂಗಳೂರಿನಿoದ ದೇವಿ ಮನೆಘಟ್ಟಕ್ಕೆ ಬಂದು ಕೊಲೆಯಾದ ಬಶೀರ್ ಸಾಬ್, ಪರಶುರಾಮ ಹಾಗೂ ಈತನ ದೊಡ್ಡಮ್ಮನ ಮಗನಾದ ರವಿ, ಬಸವರಾಜ ಜೊತೆಯಾಗಿ ಮಧ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಪರಶುರಾಮ ಈತನು ಬಶೀರ್ ಸಾಬ್‌ಗೆ ಹಿಂಭಾಗದಿoದ ಕಟ್ಟಿಗೆಯಲ್ಲಿ ಹೊಡೆದು ಕೊಲೆಗೈದು, ಆ ಬಳಿಕ ಎಲ್ಲರು ಸೇರಿ ಶವವನ್ನು ಅಲ್ಲಿಯೇ ಕಾಡಿನಲ್ಲಿ ಎಸೆದುಹೋಗಿದ್ದರು.
ಘಟನೆ ಬೆಳಕಿಗೆ ಬಂದoತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ನಾಲ್ಕು ಜನ ಆರೋಪಿತರನ್ನು ಬಂಧಿಸಿದ್ದಾರೆ. ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯದ ಸುಪರ್ದಿಗೆ ಹಾಜರುಪಡಿಸಲಾಗಿದೆ. ಈ ಒಂದು ಕಾರ್ಯಾಚರಣೆಯಲ್ಲಿ ಕುಮಟಾ ಪಿ.ಎಸ್.ಐ ನವೀನ್ ನಾಯ್ಕ, ಕುಮಟಾ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ, ಪಿ.ಎಸ್.ಐ ಸಂಪತ್, ಸಿಬ್ಬಂದಿಗಳಾದ ಗಣೇಶ ನಾಯ್ಕ, ಗುರು ನಾಯಕ, ಪ್ರದೀಪ ನಾಯ್ಕ, ಲೋಕೇಶ, ರಾಜು ನಿರಂಜನ ಸೇರಿದಂತೆ ಇರರರು ಭಾಗಿಯಾಗಿದ್ದರು.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ