Big News
Trending

Uttara Kannada Tourist Places: ತಗ್ಗಿದ ಮಳೆಯಬ್ಬರ: ಕಡಲತೀರಗಳತ್ತ ಪ್ರವಾಸಿಗರ ದಂಡು

ಕಳೆದ ನಾಲ್ಕು ತಿಂಗಳಿoದ ಭಾರಿ ಮಳೆ ಕಾರಣಕ್ಕೆ ಬಂದಾಗಿದ್ದ ಪ್ರವಾಸಿ ತಾಣಗಳತ್ತ ಇದೀಗ ಪ್ರವಾಸಿಗರು ಇದೀಗ ಮುಖಮಾಡಿದ್ದಾರೆ.

WhatsApp Group Join Now

ಕಾರವಾರ: ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಪ್ರವಾಸೋಧ್ಯಮದ ಮೂಲಕ ಜನರ ಕಣ್ಮನ ಸೆಳೆಯುವ ಜಿಲ್ಲೆಯತ್ತ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲಿಯೂ ಕಳೆದ ಮೂರ್ನಾಲ್ಕು ದಿನಗಳಿಂದ ಸಾಲು ಸಾಲು ರಜೆಗಳಿದ್ದ ಹಿನ್ನಲೆಯಲ್ಲಿ ಪ್ರವಾಸಿಗರು ಕಡಲತೀರಗಳಿಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಪ್ರವಾಸಿ ತಾಣಗಳು (Tourist Places) ಇದೀಗ ಪ್ರವಾಸಿಗರಿಂದ ತುಂಬಿಹೋಗಿದ್ದವು.

ಕಳೆದ ನಾಲ್ಕು ತಿಂಗಳಿನಿoದ ಮಳೆಯ ಕಾರಣಕ್ಕೆ ಕಡಲತೀರಗಳಿಗೆ ಇಳಿಯಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಇದೀಗ ಮಳೆ ಕಡಿಮೆಯಾಗಿರುವ ಹಿನ್ನಲೆ ಸಮುದ್ರಕ್ಕಿಳಿಯಲು ಪ್ರವಾಸಿಗರಿಗೆ ಅವಕಾಶ ಸಿಗುವಂತಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಾಗ ನೀರಿಗಿಳಿಯಲು ಅವಕಾಶ ಸಿಕ್ಕಿರಲಿಲ್ಲ.

Karwar beach

ಮಳೆ ಕಾರಣದಿಂದಾಗಿ ಸಮುದ್ರದಲ್ಲಿ ಇಳಿಯುವುದನ್ನು ನಿಷೇಧಿಸಲಾಗಿತ್ತು. ಇದೀಗ ಗೋವಾ ತೆರಳಿದ ನಾವು ಕಾರವಾರ ಕಡಲತೀರಕ್ಕೆ ಆಗಮಿಸಿ ಎಂಜಾಯ್ ಮಾಡುತ್ತಿದ್ದೇವೆ. ಗೋವಾಗಿಂತಲೂ ಸ್ವಚ್ಚವಾಗಿರುವ ಕಡಲತೀರದಲ್ಲಿ ಎಂಜಾಯ್ ಮಾಡಲು ಖುಷಿಯಾಗುತ್ತಿದೆ. ಇಲ್ಲಿನ ವಾಟರ್ ಸ್ಪೋರ್ಟ್ಸ್ ಸಕತ್ ಎಂಜಾಯ್ ಮಾಡುತ್ತಿದ್ದೇವೆ. ಕೆಲಸದ ಒತ್ತಡದ ನಡುವೆ ಪ್ರವಾಸಕ್ಕೆ ಬಂದಿರುವುದರಿoದ ಸ್ವಲ್ಪ ರಿಲಾಕ್ಸ್ ಆಗಿದ್ದೇವೆ ಎನ್ನುತ್ತಾರೆ ಲಕ್ಷ್ಮೀಕಾಂತ ಎಂಬುವವರು.

ಇನ್ನು ಮಳೆಗಾಲದ ವೇಳೆಯಲ್ಲಿ ಕಡಲತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದರ ಜೊತೆಗೆ ನೀರಿನ ಸೆಳೆತ ಸಹ ಇರುವುದರಿಂದ ಪ್ರವಾಸಿಗರಿಗೆ ನೀರಿಗೆ ಇಳಿಯಲು ನಿರ್ಭಂದ ಹೇರಲಾಗುತ್ತದೆ. ಪ್ರತಿವರ್ಷ ಉತ್ತರಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಬೀಚ್‌ಗಳಿಗೆ ನಿಷೇಧ ಅವಧಿಯಾಗಿದ್ದು ಈ ಅವಧಿಯಲ್ಲಿ ಸಮುದ್ರ ಅಪಾಯಕಾರಿಯಾಗುವುದರಿಂದ ನೀರಿಗಿಳಿಯಲು ಯಾರಿಗೂ ಸಹ ಅವಕಾಶ ಇರುವುದಿಲ್ಲ. ಇದೀಗ ಮಳೆ ಕಡಿಮೆಯಾಗಿರುವುದರ ಜೊತೆಗೆ ನಿಷೇಧ ಅವಧಿಯೂ ಮುಗಿದಿರುವುದರಿಂದ ಪ್ರವಾಸಿಗರು (Tourist Places) ಸಮುದ್ರಕ್ಕಿಳಿದು ಎಂಜಾಯ್ ಮಾಡುತ್ತಿದ್ದಾರೆ.

ಜೊತೆಗೆ ಇಲ್ಲಿನ ಕಡಲತೀರದಲ್ಲಿರುವ ವಾರ್‌ಶಿಪ್ ಮ್ಯೂಸಿಯಂ, ರಾಕ್‌ಗಾರ್ಡನ್, ಸಾಲುಮರದ ತಿಮ್ಮಕ್ಕ ವನ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೂ ಸಹ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಸಾಲು ಸಾಲು ರಜೆಯಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹರಿದುಬರುತ್ತಿರುವುದು ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಿದೆ ಅಂತಾರೇ ಪ್ರವಾಸಿತಾಣದ ನಿರ್ವಾಹಕರಾದ ವಿಜಯ್.

( Uttara Kannada) ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶೀಘ್ರದಲ್ಲೇ ಯುದ್ಧವಿಮಾನ ವಸ್ತುಸಂಗ್ರಹಾಲಯ ಸಹ ಸಿದ್ಧವಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರವಾರಕ್ಕೆ ಇನ್ನಷ್ಟು ಪ್ರವಾಸಿಗರನ್ನ ಆಕರ್ಷಿಸಲಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button