Follow Us On

WhatsApp Group
Important
Trending

ಅಶೋಕ ಚಕ್ರ ತೆಗೆದು ಅರ್ಧಚಂದ್ರ: ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ:ವಿಡಿಯೋ ವೈರಲ್ ಬಳಿಕ ಪ್ರಕರಣ ದಾಖಲು

ಕುಮಟಾ: ತ್ರಿವರ್ಣ ಧ್ವಜದ ಅಶೋಕ ಚಕ್ರ ತೆಗೆದು ಅರ್ಧಚಂದ್ರದೊoದಿಗೆ ಉರ್ದು ಬರವಣಿಗೆ ಬರೆಸಿ ಮೆರವಣಿಗೆ ನಡೆಸಿ ರಾಷ್ಟಧ್ವಜಕ್ಕೆ ಅಪಮಾನ ನಡೆಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಮಿರ್ಜಾನನಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಕುಮಟಾದ ಮಿರ್ಜಾನ್ ಗ್ರಾಮದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಮಿರ್ಜಾನ್‌ನ ಜಮಾತ್ ಉಲ್ ಮುಸ್ಲಮಿನ್ ಕಮಿಟಿ ಮೆರವಣಿಗೆ ವೇಳೆ ರಾಷ್ಟ್ರಧ್ವಜದಲ್ಲಿ ಅಶೋಕಚಕ್ರದ ಬದಲು ಅರ್ಧಚಂದ್ರ ಹಾಕಲಾಗಿತ್ತು. ಅಲ್ಲದೆ, ಈ ಜಾಗದಲ್ಲಿ ಉರ್ದು ಬರವಣಿಗೆ ಬರೆಸಿ ಮೆರವಣಿಗೆ ಮಾಡಲಾಗಿತ್ತು. ಈ ಘಟನೆ ಮೆರವಣಿಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಡಿಯೋ ಆಧರಿಸಿ ಕುಮಟಾ ಪೊಲೀಸರು ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ಕಾಯ್ದೆ ಅಡಿ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಶಿರಸಿಯಲ್ಲಿಯೂ ಇದೇ ರಿತಿ ರಾಷ್ಟ್ರ ಧ್ವಜಕ್ಕೆ ಮೆಕ್ಕಾ ಪೋಟೊ ಹಾಕಿ ಮನೆ ಮೇಲೆ ಹಾರಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಓರ್ವನ ಬಂಧಿಸಿದ್ದರು. ಇದೀಗ ಕುಮಟಾದಲ್ಲಿ ಸಾಮರಸ್ಯ ಕದಡುವವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಆರೋಪಿಯ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

ಕುಮಟಾ ಪೊಲೀಸ್ ಕಾನ್ಟೇಬಲ್ ಪ್ರದೀಪ್ ನಾಯಕ ಸಾಮಾಜಿಕ ಜಾಲತಾಣ ನೋಡುತ್ತಿರುವಾಗ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ಯಾರು? ಆತನ ಉದ್ದೇಶ ಏನು? ಎಂಬುದರ ಕುರಿತು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button