ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ (NIELIT Recruitment) ಒಟ್ಟು 80 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ- ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ ಆದವರು ಅರ್ಜಿ ಸಲ್ಲಿಸಬಹುದಾಗಿದ್ದು, ಮಾಸಿಕ ವೇತನ ಹುದ್ದೆಗಳಿಗೆ ಅನುಗುಣವಾಗಿ 18 ಸಾವಿರದಿಂದ 92,300 ಸಾವಿರದ ವರೆಗೆ ಇರಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.
(NIELIT Recruitment) ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 31, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ. ಸರ್ಕಾರಿ ಉದ್ಯೋಗಾವಕಾಶವನ್ನು ಮತ್ತು ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬಹುದಾಗಿದೆ.
ಹುದ್ದೆಗಳು | ವಿದ್ಯಾರ್ಹತೆ |
ಲ್ಯಾಬ್ ಅಸಿಸ್ಟೆಂಟ್ ಬಿ | SSLC , PUC |
ಡ್ರಾಫ್ಟ್‌ಮನ್ ಸಿ | SSLC , ITI |
ಲ್ಯಾಬ್ ಅಸಿಸ್ಟೆಂಟ್ ಎ | SSLC , PUC |
ಹೆಲ್ಪರ್ ಬಿ | SSLC |
ಟ್ರೇಡ್ಸ್ಮ್ಯಾನ್ ಬಿ | SSLC, ITI |
ಒಟ್ಟು 80 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಟ್ರೇಡ್ಸ್ ಮ್ಯಾನ್, ಹೆಲ್ಪರ್ ಹುದ್ದೆಗಳಾಗಿವೆ. ಈ ಎಲ್ಲಾ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಡ್ರಾಫ್ಟ್ಸ್ಮ್ಯಾನ್ ಸಿ: 5 ಹುದ್ದೆಗಳು, ಲ್ಯಾಬ್ ಅಸಿಸ್ಟೆಂಟ್ ಬಿ: 5 ಹುದ್ದೆಗಳು, ಲ್ಯಾಬ್ ಅಸಿಸ್ಟೆಂಟ್ ಎ: 20 ಹುದ್ದೆಗಳು, ಟ್ರೇಡ್ಸ್ಮ್ಯಾನ್ ಬಿ:26 ಹುದ್ದೆಗಳು, ಹೆಲ್ಪರ್ ಬಿ: 24 ಹುದ್ದೆಗಳು ಸೇರಿ ಒಟ್ಟು 80 ಹುದ್ದೆಗಳು ಖಾಲಿಯಿವೆ.
ಹುದ್ದೆಗಳು | ವೇತನ |
ಡ್ರಾಫ್ಟ್‌ಮನ್ ಸಿ | 29 ಸಾವಿರದಿಂದ 92,300 |
ಲ್ಯಾಬ್ ಸಹಾಯಕ ಬಿ | 25 ಸಾವಿರದಿಂದ 81,100 |
ಲ್ಯಾಬ್ ಅಸಿಸ್ಟೆಂಟ್ ಎ | 19 ಸಾವಿರದಿಂದ 63,200 |
ವ್ಯಾಪಾರಿ ಬಿ | 19 ಸಾವಿರದಿಂದ 63,200 |
ಸಹಾಯಕ ಬಿ | 18 ಸಾವಿರದಿಂದ 56,900 |
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಒಟ್ಟು ಹುದ್ದೆಗಳು | 80 |
ಸಂಸ್ಥೆ | National Institute of Electronics & Information Technology |
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್