Important
Trending

Bengal Monitor: ಮನೆಯಲ್ಲಿ ಸೇರಿಕೊಂಡು ಆತಂಕ ಮೂಡಿಸಿದ್ದ ಊಡ: ಯಶಸ್ವಿ ಕಾರ್ಯಾಚರಣೆ

ಅಂಕೋಲಾ: ಪಟ್ಟಣದ ಹೆಸ್ಕಾಂ ಕಚೇರಿಯ ಸಮೀಪ ಮನೆಯೊಂದರಲ್ಲಿ ಸೇರಿಕೊಂಡಿದ್ದ ಅಪರೂಪದ ವನ್ಯಜೀವಿ ಉಡವನ್ನು ( Bengal Monitor) ವನ್ಯಜೀವಿ ಸಂರಕ್ಷಕ ಸ್ಯಾಮುವೆಲ್ ಅವರು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದ್ದಾರೆ. ಸುಮಾರು ನಾಲ್ಕು ದಿನಗಳ ಹಿಂದೆ ಮನೆಯೊಳಗೆ ಸೇರಿಕೊಂಡಿದ್ದ ಉಡ ಆಗಾಗ ಕಾಣಿಸಿಕೊಂಡು ನಾಪತ್ತೆ ಆಗುವ ಮೂಲಕ ಮನೆಯವರ ಚಿಂತೆಗೆ ಕಾರಣವಾಗಿತ್ತು.

ಮನೆಯವರು ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಯಾಮುವೆಲ್ ಸಹಾಯದಿಂದ ಉಡವನ್ನು ( Bengal Monitor) ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ಪ್ರಮೋದ ಪಟಗಾರ, ಅರಣ್ಯ ರಕ್ಷಕ ಲಿಂಗಣ್ಣ, ಅರಣ್ಯ ವೀಕ್ಷಕ ಸುಧಾಕರ ಗಾಂವಕರ್, ಚೇತನ ನಾಯ್ಕ, ವಿಶ್ವನಾಥ ನಾಯ್ಕ, ಸುಧಾಕರ ನಾಯ್ಕ ಮೊದಲಾದವರು ಇದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button