Important
Trending

ಪಿಎಸ್‌ಐನಿಂದ ನಿಂದನೆ ಆರೋಪ: ಹಿರಿಯ ನಾಗರಿಕ ಆತ್ಮಹತ್ಯೆಗೆ ಶರಣು

ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಭಟ್ಕಳ: ವಾಹನ ಅಪಘಾತದ ವಿಷಯದಲ್ಲಿ ಪಿಎಸ್‌ಐ ಸಾರ್ವಜನಿಕವಾಗಿ ನಿಂದಿಸಿದಕ್ಕೆ ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಭಟ್ಕಳದಲ್ಲಿ ಕೇಳಿಬಂದಿದೆ. ಪಟ್ಟಣದ ಮಣ್ಕುಳಿ ನಿವಾಸಿ ಕಲ್ಮರ್ಗಿಮನೆ ಮಾರುತಿ ನಾಗಪ್ಪ ನಾಯ್ಕ(63) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ತಮ್ಮ ಹಸ್ರವಳ್ಳಿಯ ತೋಟದ ಮನೆಯಲ್ಲಿ ಗ ನಸುಕಿನ ಜಾವ ತಮ್ಮ ತೋಟದ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

WhatsApp Group Join Now

ಬೈಕ್ ಅಪಘಾತದ ವಿಷಯದಲ್ಲಿ ಪಿಎಸ್‌ಐ ಸಾರ್ವಜನಿಕವಾಗಿ ಇವರನ್ನು ನಿಂದಿಸಿ, ವಾಹನದ ಕೀಯನ್ನು ಕಸಿದುಕೊಂಡು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡ ಮಾರುತಿ ನಾಯ್ಕ ತಮ್ಮ ತೋಟದ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೃತನ ಸಹೋದರ ಮಣ್ಕುಳಿ ಸುಬ್ರಾಯ ನಾಗಪ್ಪ ನಾಯ್ಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗ್ರಾಮೀಣ ಠಾಣಾ ಪಿಎಸ್ಐ ಮೂಯೂರ ಪಟ್ಟಣ ಶೆಟ್ಟಿ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ಈ ಬಗ್ಗೆ ಮೃತನ ಸಹೋದರ ಸುಬ್ರಾಯ ನಾಗಪ್ಪ ನಾಯ್ಕ ಆರೋಪಿಸಿದ್ದು ಅಪಘಾತವೊಂದರ ವಿಚಾರವಾಗಿ ಆಟೋ ರಿಕ್ಷಾ ಚಾಲಕರು ಮತ್ತೆ ನನ್ನ ತಮ್ಮನ ಮಧ್ಯೆ ರಾಜಿ ನಡೆದಿದ್ದರು ಸಹ ಶಹರ ಠಾಣೆ ಪಿಎಸ್‌ಐ ಅವರು ನನ್ನ ಸಹೋದರ ಮಾರುತಿಯನ್ನು ಮಾನಸಿಕವಾಗಿ ಹಿಂಸೆಕೊಟ್ಟು ಅವಮಾನಿಸಿದ್ದಾರೆ. ಇದನ್ನೇ ತಲೆಗೆ ಹಚ್ಚಿಕೊಂಡು ಆತ ತನ್ನ ಕುಟುಂಬದವರಿಗೆ ಸ್ನೇಹಿತರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿಕೊಂಡಿದ್ದರು.

ಸ್ಟೇಟ್ ಬ್ಯಾಂಕ್ ನಲ್ಲಿ ಅಡೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು 2 ವರ್ಷದ ಹಿಂದೆ ನಿವ್ರತ್ತಿ ಹೊಂದಿದ್ದರು. ನಾನು ಗದ್ದೆ ಕೆಲಸ ಮಾಡಿ ಜೀವನ ನಡೆಸಿಕೊಂಡು ಬಂದಿದ್ದು , ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ತನ್ನ ಪಿಎಪ್ ಹಣದಿಂದ ಮದುವೆ ಮಾಡಿಸುವುದಾಗಿ ಹೇಳಿದ್ದ ತಮ್ಮ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿಎಸ್ಐ ಅವರು ನಡೆಸಿಕೊಂಡ ರೀತಿಯೇ ಕಾರಣ ಎಂದು ಆರೋಪಿಸಿದ್ದಾರೆ.

ಪಿಎಸ್ಐ ಅವರ ಮಾತಿನ ದಾಟಿಯು ಹಿರಿಯ ನಾಗರಿಕರಾದ ಮಾರುತಿ ನಾಯ್ಕ ಅವರು ಮಾನಸಿಕವಾಗಿ ನೊಂದಿದ್ದು, ಈ ಬಗ್ಗೆ ಪೋಲಿಸ್ ಹಿರಿಯ ಅಧಿಕಾರಯನ್ನು ನಾಮಧಾರಿ ಸಮಾಜದ ಕಮಿಟಿಯು ಸಂಪರ್ಕಿಸಿ ಈ ಪ್ರಕರಣಕ್ಕೆ ಸಂಬoಧಿಸಿದoತೆ ನ್ಯಾಯ ಸಿಗಬೇಕೆಂಬ ಒತ್ತಾಯ ಮಾಡಲಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಕ್ರಷ್ಣ ನಾಯ್ಕ ಹೇಳಿದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button