ವೈದ್ಯರಿಗೂ ತಗುಲಿತೆ ಸೋಂಕು?
ಗುಣಮುಖರಾದ ಈರ್ವರ ಬಿಡುಗಡೆ: ಸಕ್ರೀಯ ಪ್ರಕರಣಗಳು 7
ಅಂಕೋಲಾ : ತಾಲೂಕಿನ ಮೂಲದ ಆರೋಗ್ಯ ಸಿಬ್ಬಂದಿಯೋರ್ವರಲ್ಲಿ ಸೋಂಕಿನ ಲಕ್ಷಣಗಳು ದೃಢಪಟ್ಟಿದೆ. 31 ವರ್ಷದ ಕೋವಿಡ್ ವಾರಿಯರ್ ಯೋಧ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಇಂದು ಕಾರವಾರ ಮತ್ತು ಅಂಕೋಲಾ ಆಸ್ಪತ್ರೆಗಳಿಂದ ಗುಣಮುಖರಾದ ತಲಾ ಓರ್ವರನ್ನು ಬಿಡುಗಡೆಗೊಳಿಸಲಾಗಿದ್ದು, ಸಕ್ರೀಯ ಸೋಂಕಿತರ ಸಂಖ್ಯೆ 7ಕ್ಕೆ ತಲುಪಿದೆ. ಅವರ್ಸಾ ಮತ್ತು ಮಂಜಗುಣಿ ವ್ಯಾಪ್ತಿಯಲ್ಲಿ 112 ಜನರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿದೆ.
ವೈದ್ಯರಿಗೂ ಸೋಂಕಿತೆ ನಂಜಾಣು?: ತಾಲೂಕಿನ ಪ್ರಸಿದ್ಧ ವೈದ್ಯರೊಬ್ಬರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಕೇಳಿ ಬಂದಿತ್ತಾದರೂ ಅಲ್ಲಲ್ಲಿ ಗುಸು-ಗುಸು ಸುದ್ದಿಗೆ ಮಾತ್ರ ಗ್ರಾಸವಾಗಿತ್ತು. ದಿನಗಳದಂತೆ ಆ ಸುದ್ದಿ ಮಾಸುತ್ತಾ ಬಂದಿತ್ತಾದರೂ, ರವಿವಾರ ಅದೇ ವೈದ್ಯರನ್ನು, ಅಂಕೋಲಾದಿಂದ ಪಕ್ಕದ ಜಿಲ್ಲೆಯ ಪ್ರಮುಖ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎನ್ನುವ ಹೊಸ ಸುದ್ದಿ, ಹಳೆಯ ವದಂತಿಗಳಿಗೆ ರೆಕ್ಕೆ-ಪುಕ್ಕ ನೀಡಿದಂತಾಗಿದೆ. ನಿಜವಾಗಿಯೂ ವೈದ್ಯರಿಗೆ ಕರೊನಾ ಸೋಂಕಿನ ನಂಜು ತಗುಲಿದೆಯೇ? ಅಥವಾ ವೈದ್ಯರ ದೇಹಾರೋಗ್ಯದಲ್ಲಿ ಒಮ್ಮೆಲೆಯೇ ಏರು-ಪೇರಾಗಿ ಹೃದಯ ಮತ್ತಿತರ ರೋಗ ಲಕ್ಷಣಗಳು ಕಾಣಿಸಿಕೊಂಡಿರಬಹುದೆ ಎನ್ನುವ ಮಾತುಗಳು ಚರ್ಚೆಗೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ಈ ಕುರಿತು ಉತ್ತರ ದೊರೆಯಬಹುದಾಗಿದೆ. ವಿಷಯ ಗಂಭೀರತೆ ಮತ್ತು ಜನ ಸಾಮಾನ್ಯರ ಚರ್ಚೆ ಏನೆ ಇದ್ದರೂ, ಪ್ರಸಿದ್ಧ ವೈದ್ಯರು ಶೀಘ್ರ ಚೇತರಿಸಿಕೊಂಡು ಮತ್ತೆ ಜನತೆಯ ಸೇವೆಗೆ ಮುಂದಾಗಲಿ ಎನ್ನುವುದು ಹಿತೈಶಿಗಳ ಮತ್ತು ವೈದ್ಯರ ಆಸ್ಪತ್ರೆಯಲ್ಲಿ ಈ ಹಿಂದೆ ಚಿಕಿತ್ಸೆಗೊಳಪಟ್ಟ ಕೆಲ ರೋಗಿಗಳ ಕುಟುಂಬದವರ ಪ್ರಾರ್ಥನೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ