Follow Us On

WhatsApp Group
Important
Trending

ಮನೆಯಂಗಳಕ್ಕೆ ಬಂದಿದ್ದ ಬೃಹತ್ ಕಾಳಿಂಗ ಸರ್ಪ: ಕಳೆದ ಎರಡು ಮೂರು ದಿನಗಳಿಂದ ಅಡಿಕೆತೋಟದಲ್ಲಿ ಸುತ್ತಾಟ

ಶಿರಸಿ: ಮನೆ ಸಮೀಪ ಬಂದಿದ್ದ ಸುಮಾರು 9 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು (king cobra) ಉರಗ ತಜ್ಞ ಪ್ರಶಾಂತ ಹುಲೇಕಲ್ ಸುರಕ್ಷಿತ ವಾಗಿ ಹಿಡಿದು ಕಾಡಿಗೆ ಬಿಟ್ಟ ಘಟನೆ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಲಮನೆಯಲ್ಲಿ ಗುರುವಾರ ನಡೆದಿದೆ. ಇಲ್ಲಿಯ ಗಣಪತಿ ಆರ್ ಹೆಗಡೆ ಅವರ ಮನೆಯಂಗಳದಲ್ಲಿ ಈ ಹಾವು ಪ್ರತ್ಯಕ್ಷವಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಮನೆ ಸಮೀಪದಲ್ಲಿಯೇ ಇದ್ದ ಅಡಕೆ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಹಾವು ಗುರುವಾರ ಮನೆಯಂಗಳಕ್ಕೇ ಬಂದಿತ್ತು. ಬೃಹತ್ ಆಕಾರ ಹೊಂದಿದ ಈ ಹಾವನ್ನು ಉರಗ ತಜ್ಞ ಪ್ರಶಾಂತ ಹುಲೇಕಲ್ ಸುರಕ್ಷಿತವಾಗಿ (king cobra) ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button