KLE ಶಿಕ್ಷಣ ಸಂಸ್ಥೆಯ 19 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ: ಪ್ರೇಮ ಗಿರಿ ಹಸ್ತ ಪ್ರತಿ ಬಿಡುಗಡೆ

ಅಂಕೋಲಾ: ಪಟ್ಟಣದ ಕೆ.ಎಲ್. ಇ ಶಿಕ್ಷಣ ಸಂಸ್ಥೆಯ 19 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರೇಮ ಗಿರಿ ಹಸ್ತ ಪ್ರತಿ ಬಿಡುಗಡೆ ಮತ್ತು ದೀಪದಾನ ಕಾರ್ಯಕ್ರಮ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು. ಕುಮಟಾ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪ್ರೀತಿ ಭಂಡಾರಕರ್ ಕಾರ್ಯಕ್ರಮ ಉದ್ಘಾಟಿಸಿ ಹಸ್ತಪ್ರತಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಕೇವಲ ಬುದ್ದಿ ಲಬ್ದಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದು ಅದರ ಬದಲಾಗಿ ಮಾನಸಿಕ ಬೆಳವಣಿಗೆ ಆಧ್ಯಾತ್ಮಿಕತೆಗೆ ಒತ್ತು ಕೊಡಬೇಕಾಗಿದೆ ಹಾಗೂ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವಂತಹ ಶಿಕ್ಷಣ ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕ ಸಹ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಆದರ್ಶನಾಗಿರಬೇಕು. ಶಿಕ್ಷಕನಾದವನು ಸಂಸ್ಕೃತಿಯುತ್ತ ಮಾತುಗಳಿಂದ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಇ.ಸಮೂಹ ಸಂಸ್ಥೆಗಳ ಸದಸ್ಯರಾದ ಡಾ. ಮಿನಲ ನಾರ್ವೇಕರ್ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು ಪ್ರತಿಯೊಬ್ಬರಿಗೂ ಗೌರವ ನೀಡಬೇಕು ಎಂದು ಕರೆ ನೀಡಿದರು.
ಉನ್ನತಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ವಿನಾಯಕ ಜಿ.ಹೆಗಡೆ ಸ್ವಾಗತಿಸಿದರು.

ಉಪನ್ಯಾಸಕಿ ಡಾ. ಪುಷ್ಪ ನಾಯ್ಕ್ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪ್ರವೀಣ ನಾಯಕ್ ವರದಿ ವಾಚಿಸಿದರು.ಸಾಂಸ್ಕೃತಿಕ ವಿಭಾಗದ ಬಹುಮಾನ ವಿಜೇತರ ಯಾದಿಯನ್ನು ಉಪನ್ಯಾಸಕಿ ಅಮ್ರಿನಾಝ್ ಶೇಕ್,ಕ್ರೀಡಾ ಬಹುಮಾನದ ಯಾದಿಯನ್ನು ಉಪನ್ಯಾಸಕ ಮಂಜುನಾಥ ಇಟಗಿ ವಾಚಿಸಿದರು. ಕುಮಾರಿ ವರ್ಷ ಆಚಾರಿ ಮತ್ತು ಮಾನಸ ನಾಯ್ಕ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮನೋಜ್ ಗೌಡ ಎಂ. ವಂದಿಸಿದರು. ಕೆ.ಎಲ್. ಇ ಅಂಗಸಂಸ್ಥೆಗಳ ಪ್ರಮುಖರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version