ಅಂಕೋಲಾ: ಕೆ.ಎಲ್. ಇ ಸಂಸ್ಥೆಯ 108 ನೇ ಸಂಸ್ಥಾಪನಾ ದಿನಾಚರಣೆ ಪಟ್ಟಣದ ಕೆ. ಎಲ್. ಇ ಸಭಾಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ.ಎಲ್. ಇ ಸಮೂಹ ಸಂಸ್ಥೆಗಳ ಸ್ಥಳೀಯ ಕಾರ್ಯದರ್ಶಿ ಡಾ ದಿನೇಶ ಭಟ್ಕಳ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆ.ಎಲ್. ಇ ಸಮೂಹ ಸಂಸ್ಥೆಗಳ ಕೊಡುಗೆ ಅಪಾರವಾಗಿದ್ದು ಅತ್ಯಂತ ವೇಗವಾಗಿ ಬೆಳೆಯುತ್ತ ಏಷ್ಯಾದ ಪ್ರತಿಷ್ಠಿತ ಸಂಸ್ಥೆ ಎನಿಸಿದೆ ಮಹಾನ್ ಚಿಂತಕರಾಗಿದ್ದ ಪಿಕಳೆ ದಂಪತಿ ಅವರ ಚಿಂತನೆಯ ಫಲವಾಗಿ ಅಂಕೋಲಾದಲ್ಲಿ ಕೆ ಎಲ್ ಇ ಸಂಸ್ಥೆ ಆಗಮಿಸಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದರು.
ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಶಿಕ್ಷಕ ಆದೇಶ ಹೂಲಗೇರಿ ಕೆ.ಎಲ್. ಇ ಸಂಸ್ಥಾಪನಾ ದಿನಾಚರಣೆ ಕುರಿತು ಮಾತನಾಡಿದರು.
ಸಂಸ್ಥೆಯ ಸ್ಥಳೀಯ ಸದಸ್ಯೆ ಡಾ.ಮೀನಲ್ ನಾರ್ವೇಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾಧಕ ಶಿಕ್ಷಕ ರಾಮನಾಥ ಕಾಮತ, ರಾಜು ನಾಯ್ಕ, ಬಿ.ಇಡಿ ಪ್ರಥಮ ರ್ಯಾಂಕ್ ವಿದ್ಯಾರ್ಥಿನಿ ಪೂರ್ವಿ ಹಳಗೇಕರ್, ಗುಮಾಸ್ತೆ ಚಂದ್ರಕಲಾ ಮಡಿವಾಳ, ಜವಾನ ರಿಯಾಜ ಫಿರಜಾದೆ, ನಾಗರಾಜ ಗಾಂವಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಮಹಾವಿದ್ಯಾಲಯರ ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಸ್ವಾಗತಿಸಿದರು, ಉಪನ್ಯಾಸಕಿ ಡಾ ಪುಷ್ಪಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಗಂಗಾಧರ ಇಸರಣ್ಣನವರ್ ವಂದಿಸಿದರು.ಸಮೂಹ ಸಂಸ್ಥೆಗಳ ಮುಖ್ಯಸ್ಥರು,ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ