Important
Trending

12 ವರ್ಷದ ಮಗಳೊಂದಿಗೆ ನಾಪತ್ತೆಯಾದ ವಿವಾಹಿತ ಮಹಿಳೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಅಂಕೋಲಾ: ಲಾರಿ ಕ್ಲೀನರ್ ಆಗಿ ಬಂದು ತಾಲೂಕಿನ ಶೆಟಗೇರಿಯಲ್ಲಿ ವಾಸವಾಗಿದ್ದ ವ್ಯಕ್ತಿಯೋರ್ವ, ತನ್ನ ಹೆಂಡತಿಯು ಮಗಳೊಂದಿಗೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರ ತಾಲೂಕಿನ ಕೆಳಗಿನ ಪಾಳ್ಯ ಮೂಲದ ಹಾಲಿ ಅಂಕೋಲಾ ತಾಲೂಕಿನ ಶೆಟಗೇರಿಯಲ್ಲಿ ವಾಸವಾಗಿದ್ದ ಸಾವಿತ್ರಿ ಈಶ್ವರ ಮೇಸ್ತ (32) ಕಾಣೆಯಾದ ಮಹಿಳೆ.

ನವೆಂಬರ್ 8 ರಂದು 2.30 ರ ಸುಮಾರಿಗೆ ತನ್ನ ಮಗಳು ದೀಪಿಕಾ (12) ಇವಳನ್ನು ಕರೆದುಕೊಂಡು ಮನೆಯಿಂದ ಎಲ್ಲಿಗೋ ಹೋದವಳು ಇದುವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ, ಕಾಣೆಯಾದ ತನ್ನ ಹೆಂಡತಿ ಮತ್ತು ಮಗಳನ್ನು ಪತ್ತೆ ಮಾಡಿ ಕೊಡಿ ಎಂದು ಈಶ್ವರ ವಾಮನ ಮೇಸ್ತಾ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಅಂದಾಜು 5 ಪೂಟ್ 1 ಇಂಚು ಎತ್ತರ, ಬಿಳಿ ಮೈ ಬಣ್ಣ, ಗೋಲು ಮುಖ, ಸಾಧಾರಣ ಮೈಕಟ್ಟು,ಕನ್ನಡ, ಕೊಂಕಣಿ ಭಾಷೆ ಅರಿತಿರುವ, ಇವಳು ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ಗುಲಾಬಿ ಬಣ್ಣದ ವೇಲ್, ಕುತ್ತಿಗೆಯಲ್ಲಿ ಕರಿಮಣಿ ಸರ, ಕಿವಿಯಲ್ಲಿ ಓಲೆ, ಕೈ ಬೆರಳುಗಳಿಗೆ ಸ್ಟೀಲ್‌ ನಮೂನೆಯ ಉಂಗುರ ಮತ್ತು ನೀಲಿ ಬಣ್ಣದ ಸ್ಲೀಪ್ ಚಪ್ಪಲಿ ಧರಿಸಿದ್ದು,ಈ ಮೇಲಿನ ಚಹರೆಯುಳ್ಳ ಸಾವಿತ್ರಿ , ಎಲ್ಲಿಯಾದರೂ ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button