ಕುಮಟಾ: ಎಲ್ಲ ಓಡಾಟಕ್ಕೂ ವಾಹನಗಳನ್ನೇ ಅವಲಂಬಿಸಿರುವ ಇಂದಿನ ಕಾಲದಲ್ಲಿ ಒಂದೆರಡು ಕಿಲೋಮೀಟರ್ ನಡೆಯುವುದು ಕಷ್ಟಸಾಧ್ಯವಾಗಿದೆ. ಆದ್ರೆ, ಇವರು ಮಾತ್ರ ವಿಭಿನ್ನ. ಇವರು ವೀಲ್ ಚೇರ್ ಮೂಲಕ ಸಾವಿರಾರು ಕಿ.ಮೀ ಈಗಾಗಲೇ ಕ್ರಮಿಸಿ, ರಾಮ ಜನ್ಮಭೂಮಿಯ ಅಯೋಧ್ಯೆಗೆ ತೆರಳುವ ಗುರಿ ಹೊಂದಿದ್ದಾರೆ. 2021 ರಲ್ಲಿ ಪ್ರಾರಂಭವಾದ ಇವರ ಈ ಯಾತ್ರೆ ಇದೀಗ ಸುಮಾರು 4000 ಕಿ.ಮೀ ಸಾಗಿದೆ.
ಮೂಲತಃ ಸೌದತ್ತಿಯವರಾದ ಮಂಜುನಾಥ ಅವರು 2021ಕ್ಕೂ ಮೊದಲು ಬೈಕ್ ಹಾಗೂ ಸೈಕಲ್ ಮೂಲಕ ಸಾಕಷ್ಟು ಯಾತ್ರಯನ್ನು ಕೈಗೊಂಡವರು. ಬಳಿಕ ನಡೆದ ಅಪಘಾತವೊಂದರಲ್ಲಿ ಕಾಲಿಗೆ ಬಲವಾದ ಪೆಟ್ಟು ಬಿದ್ದ ಕಾರಣ ನಡೆಯಲೂ ಕೂಡ ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿದ್ದರು. ತದನಂತರ ಭಾಗೇಶ್ವರ ದಾಮದ ಧಿರೇಂದರ್ ಧರ್ಮಚಾರಿ ಅವರ ಆಶೀರ್ವಾದ ಪಡೆದು, ಅವರಿಂದ ಉತ್ತೇಜನೆ ಪಡೆದು ವೀಲ್ ಚೇರ್ ಮೂಲಕವೇ ಇದೀಗ ಅಯೋಧ್ಯೆಗೆ ಯಾತ್ರೆಯನ್ನು ಕೈಗೊಂಡಿದ್ದಾರೆ.
ಗೋಕಾಕ್ ದಿಂದ ದೆಹಲಿ, ದೆಹಲಿಯಿಂದ ಮಥುರಾ, ಆಗ್ರ, ಕನ್ಯಾಕುಮಾರಿ, ಧರ್ಮಸ್ಥಳ, ಉಡುಪಿ, ಮುರ್ಡೆಶ್ವರ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡುತ್ತಾ ವೀಲ್ ಚೇರ್ ಮೂಲಕ ಸಾಗುತ್ತಿದ್ದಾರೆ. ಹಿಂದುತ್ವ ಉಳಿಯಬೇಕು, ಸನಾತನ ಧರ್ಮ ಉಳಿಯಬೇಕು, ಜಾತಿ ಬೇದ ಮರೆತು ಎಲ್ಲರೂ ಸಮಾಜದಲ್ಲಿ ಶಾಂತಿಯಿAದರಬೇಕು ಎಂಬುದು ಇವರ ಮುಖ್ಯ ಉದ್ದೇಶವಾಗಿದ್ದು, ಅದೇ ರೀತಿ ರಾಮ ಜನ್ಮ ಭೂಮಿಯಲ್ಲಿ ಸಿದ್ದಗೊಂಡಿರುವ ರಾಮ ಮಂದಿರವು ಶಾಂತಿಯುತವಾಗಿ ಉದ್ಘಾಟನೆಗೊಳ್ಳಬೇಕು ಎಂಬುದೇ ಇವರ ಮುಖ್ಯ ಉದ್ಧೇಶವಾಗಿದೆ.
ಅಪಘಾತದಿಂದ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರೂ ಕೂಡ ಅದಾವುದನ್ನು ಲೆಕ್ಕಿಸದೇ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ವೀಲ್ ಚೇರ್ ಮೂಲಕವೇ ಸಾವಿರಾರು ಕಿ.ಮಿ ಕ್ರಮಿಸುತ್ತಿರುವ ಇವರ ಈ ಸಾಧನೆ ಪ್ರತಿಯೋರ್ವರಿಗೂ ಸ್ಪೂರ್ತಿ ಎನ್ನಬಹುದಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ