Follow Us On

WhatsApp Group
Important
Trending

ಕಲುಷಿತ ನೀರಿನ ವರದಿಗೆ ಅನಂತ ಮೂರ್ತಿ ಹೆಗಡೆ ಸ್ಪಂದನೆ: ಮತ್ತೊಂದು ನೀರಿನ ಘಟಕ ದೇಣಿಗೆ: ಹೊಸದಾಗಿ ನೀರಿನ ಟ್ಯಾಂಕ್ ಅಳವಡಿಕೆ

ಕುಮಟಾ: ಹೊಸ ಬಸ್ ನಿಲ್ದಾಣದಲ್ಲಿನ ಕುಡಿಯುವ ನೀರಿನ ಘಟಕದಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬುರುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ವಿಸ್ಮಯ ಟಿ.ವಿ. ಯು ವಸ್ತು ಸ್ಥಿತಿಯ ಕುರಿತಾಗಿ ಸಂಕ್ಷಿಪ್ತವಾದ ವರದಿಯನ್ನು ಮಾಡಿ ಅಧಿಕಾರಿಗಳ ಗಮನ ಸೆಳೆಯವು ಕಾರ್ಯ ಮಾಡಿತ್ತು. ವಿಸ್ಮಯ ಟಿ.ವಿ ಯ ವರದಿಯ ಬೆನ್ನಲ್ಲೆ ಈ ಹಿಂದೆ ಕುಮಟಾದ ಹೊಸ ಬಸ್ ನಿಲ್ಧಾಣಕ್ಕೆ ಶುದ್ಧ ಕುಡಿಯವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಿದ್ದ ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಬ್ಯಾಗದ್ದೆ ಶಿರಸಿ ಇದರ ಸಂಸ್ಥಾಪಕರಾದ ಅನಂತಮೂರ್ತಿ ಹೆಗಡೆ ಅವರು, ಸಾರ್ವಜನಿಕರ ಹಿತದೃಷ್ಠಿಯಿಂದ ಮತ್ತೊಂದು ಕುಡಿಯುವ ನೀರ ಘಟಕವನ್ನು ದೇಣಿಗೆಯಾಗಿ ನೀಡುವ ಜೊತೆಗೆ ಹೊಸದಾಗಿ ನೀರಿನ ಟ್ಯಾಂಕ್‌ಅನ್ನು ಸಹ ದೇಣಿಗೆಯಾಗಿ ನೀಡಿದ್ದಾರೆ.

ಈ ಸಂಬoದ ಕುಮಟಾ ಹೊಸ ಬಸ್ ನಿಲ್ಧಾಣದ ಟ್ರಾಫಿಕ್ ಕಂಟ್ರೋಲರ್ ಉದಯ ಹಾದಿ ಮನೆ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಜಿಲ್ಲೆಯ ಕೇಂದ್ರ ಬಿಂದು ಕುಮಟಾ ಆದ ಕಾರಣ ನಮ್ಮ ಈ ಬಸ್ ನಿಲ್ದಾಣ ಸದಾ ಕಾಲ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ಹಿಗಿರುವಾಗ ಸಾರ್ವಜನಿಕರಿಗೆ ಕುಡಿಯುವ ನೀರಿನ ಅವಶ್ಯಕತೆ ಬಹಳ ಇರುತ್ತದೆ.

ಈಗಾಗಲೇ ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಿದ್ದ ಕುಡಿಯುವ ನೀರಿನ ಘಟಕದಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತಿದೆ. ಇದೀಗ ಮತ್ತೊಂದು ನೀರಿನ ಘಟಕ ಹಾಗೂ ಹೊಸದಾಗಿ ನೀರಿನ ಟ್ಯಾಂಕ್ ಅಳವಡಿಸುವ ಕಾರ್ಯ ಮಾಡಿದ್ದು ಇದರಿಂದ ಸಾರ್ವಜನಿಕರಿಗೆ ಇನ್ನು ಹೆಚ್ಚಿನ ಅನುಕೂಲ ಆಗಲಿದೆ ಎಂದರು.

ಮತ್ತೊAದು ಕುಡಿಯುವ ನೀರ ಘಟಕವನ್ನು ದೇಣಿಗೆಯಾಗಿ ನೀಡುವ ಜೊತೆಗೆ ಹೊಸದಾಗಿ ನೀರಿನ ಟ್ಯಾಂಕ್‌ಅನ್ನು ಸಹ ದೇಣಿಗೆಯಾಗಿ ನೀಡಿದ ಅನಂತಮೂರ್ತಿ ಹೆಗಡೆಯವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button