Follow Us On

Google News
Important
Trending

ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ಬರುತ್ತಿದ್ದ ವೇಳೆ ಅಪಘಾತ: ಬೈಕಿಗೆ ಡಿಕ್ಕಿಹೊಡೆದ ಲಾರಿ: ಶಾಲೆಗೆ ತೆರಳುತ್ತಿದ್ದ ಶಿಕ್ಷಕ ಸಾವು

ಕಾರವಾರ: ಅನಾರೋಗ್ಯಕ್ಕೆ ಒಳಗಾಗಿದ್ದ ತಂದೆಯನ್ನ ಆಸ್ಪತ್ರೆಗೆ ದಾಖಲಿಸಿ, ಅತ್ತ ಹತ್ತಾರು ಮಕ್ಕಳಿಗೆ ಪಾಠ ಮಾಡಿ ಅವರ ಭವಿಷ್ಯ ರೂಪಿಸೋದಕ್ಕಂತಾ ಬೈಕ್ ಮೇಲೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕನೋರ್ವ ವಿಧಿಯ ಆಟಕ್ಕೆ ಸಿಲುಕಿ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ನಡೆದು ಹೋಗಿದೆ.

ಅನಾರೋಗ್ಯಕ್ಕೆ ಒಳಗಾಗಿದ್ದ ತನ್ನ ತಂದೆಯನ್ನ ಆಸ್ಪತ್ರೆಗೆ ದಾಖಲಿಸಿ ಬೈಕ್ ಮೇಲೆ ಶಾಲೆಗೆ ತೆರಳುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿ ಕಿನ್ನರ ಗ್ರಾಮದ 55ವರ್ಷದ ಉಮೇಶ ಗುನಗಿ ಎಂಬುವವರು ನಗರದ ಹಬ್ಬುವಾಡದಲ್ಲಿ ನಡೆದ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದಾರೆ. ಇವರು ಕಾರವಾರದ ದೇವಳಕ್ಕಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸ್ತಾ ಇದ್ದರು.

ಇವರ ತಂದೆಯವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದ ಕಾರಣ ತಂದೆಯನ್ನ ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಬೈಕ್ ಮೇಲೆ ದೇವಳಮಕ್ಕಿ ಶಾಲೆಗೆ ತೆರಳತ್ತಾ ಇದ್ರು. ಆದ್ರೆ ಈ ವೇಳೆ ಯಮಧೂತನಂತೆ ಬೈಕ್ ಹಿಂಬದಿಯಿoದ ಅತೀವೇಗವಾಗಿ ಬಂದ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಿಕ್ಷಕನ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನೂ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣವೆಂದು ಆಕ್ರೋಶ ಹೊರಹಾಕಿದ್ದ ಸ್ಥಳೀಯರು, ಗುತ್ತಿಗೆದಾರರು ಹಾಗೂ ಪಿಡಬ್ಯೂಡಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಅಪಘಾತದಲ್ಲಿ ಮೃತಪಟ್ಟಿರೋ ವ್ಯಕ್ತಿಯ ಶವವನ್ನ ಯಾವುದೇ ಕಾರಣಕ್ಕೂ ತೆಗೆದುಕೊಂಡು ಹೋಗೋದಕ್ಕೆ ಬಿಡಲ್ಲ ಎಂದು ಗಲಾಟೆ ಮಾಡಿದ್ರು.

ಇದರಿಂದಾಗಿ ಸ್ಥಳೀಯರು ಹಾಗೂ ಪೊಲೀಸ್ ರ ನಡುವೆ ಮಾತಿನ ಚಕಮಕಿ ಸಹ ಉಂಟಾಗಿ ಸುಮಾರು ಎರಡು ಗಂಟೆಗೂ ಹೆಚ್ಚಿನ ಸಮಯ ಕಾರವಾರ ಹಬ್ಬುವಾಡ ರಸ್ತೆಯಲ್ಲಿ ಸಂಚಾರ ಬಂದಾಗಿತ್ತು.ಇನ್ನೂ ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬೇರೆ ಬೇರೆ ಠಾಣೆಗಳಿಂದ ಕೂಡ ಹೆಚ್ಚಿನ ಪೊಲೀಸರನ್ನ ಘಟನಾ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು.ಬಳಿ ಶವವನ್ನ ಕಾರವಾರದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.
ಒಟ್ಟಾರೆಯಾಗಿ ಅತ್ತ ತಂದೆಯನ್ನ ಆಸ್ಪತ್ರೆಗೆ ದಾಖಲಿಸಿ ಅವರ ಆರೋಗ್ಯ ಬಗ್ಗೆ ಕಾಳಜಿ ನೀಡುವುದರ ಜೊತೆಗೆ ಇತ್ತ ಶಾಲೆಗೆ ಹೋಗಿ ಮಕ್ಕಳಿಗೆ ಪಾಠಮಾಡಬೇಕಾಗಿದ್ದ ಶಿಕ್ಷಕ ಆಕಸ್ಮಿಕವಾಗಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪುವಂತಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button