ಹೊನ್ನಾವರ: ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಉತ್ತರಕನ್ನಡ ಜಿಲ್ಲಾ ವಿಶ್ವಹಿಂದೂ ಪರಿಷತ್ ವತಿಯಿಂದ ಅಯೋಧ್ಯೆಯ ಶ್ರೀ ರಾಮ ಪ್ರಾಣ ಪ್ರತಿಷ್ಠಾ ಕಾರ್ಯ ಜನವರಿ 22 ರಂದು ನಡೆಯಲಿದ್ದು ಇದರ ಅಂಗವಾಗಿ ಅಯೊಧ್ಯೆಯಿಂದ ಬಂದ ಅಕ್ಷತಾ ಕಲಶ ವಿತರಣಾ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕರ್ಕಿಯ ಜ್ಞಾನೇಶ್ವರಿ ಮಠದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿದರು. ನಂತರ ಆರ್ಶಿವಚನೀಡಿದ ಶ್ರೀಗಳು ರಾಮರಾಜ್ಯ ಸ್ಥಾಪನೆಯ ಪೂರಕವಾಗಿ ಅಯೊಧ್ಯೆಯಲ್ಲಿ ರಾಮಮಂದಿರವು ಸ್ಥಾಪಿತವಾಗುತ್ತಿದೆ, ಬಹು ವರ್ಷದ ಬಳಿಕ ನಮ್ಮ ಹಿಂದು ಸಮಾಜದ ಬಹುವರ್ಷದ ಕನಸು ನನಸಾಗುತ್ತಿದೆ.
ಈ ಹಿಂದಿನ ಹಲವರ ತ್ಯಾಗದ ಫಲವಾಗಿ ಇಂದು ನಮ್ಮ ಯೋಗವಾಗಿದೆ. ಅಯೊಧ್ಯೆಯಂದು ಪ್ರತಿಷ್ಟಾಪನೆಯ ಕಾರ್ಯಕ್ರಮಕ್ಕೆ ಶಾರೀರಿಕವಾಗಿ ತಲುಪಸಲು ಮಾನಸಿಕವಾಗಿ ಆಧ್ಯಾತ್ಮಿಕವಾಗಿ ತಲುಪಲು ಪ್ರತಿ ಮನೆಗೆ ಅಕ್ಷತೆ ತಲುಪಿಸುವ ಕಾರ್ಯ ನಡೆಯಲಿದೆ. ಜಾತಿ ಮತವಿಲ್ಲದೇ ಪ್ರತಿ ಮನೆಯಲ್ಲಿ ಆ ದಿನ ದಿಪೋತ್ಸವ ಆಚರಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ತಾಲೂಕಿನ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯದವರಿಗೆ ಅಕ್ಷತೆಯನ್ನು ಶ್ರೀಗಳು ಹಸ್ತಾಂತರಿಸಿದರು. ಪ್ರಾಂತ ಪ್ರಮುಖರಾದ ಗಂಗಾಧರ ಹೆಗಡೆ ಮಾತನಾಡಿ 76 ಬಾರಿ ಯುದ್ದ ಮಾಡಿ ಮೂರು ಲಕ್ಷ ಹಿಂದುಗಳ ಪ್ರಾಣತ್ಯಾಗ ಮಾಡಿ ಅಯೊಧ್ಯೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಲಾಗಿದೆ ಎನ್ನುವುದು ಇತಿಹಾಸದಲ್ಲಿ ಉಲ್ಲೇಖಿತವಾಗಿದೆ. ಅಭಿಯಾನದ ರೂಪದಲ್ಲಿ ಅಯೋಧ್ಯೆ ರಾಮಂದಿರ ನಿರ್ಮಾಣ ಕಾರ್ಯ ನಡೆದಿದ್ದು, ಉದ್ಘಾಟನೆಯ ದಿನ ಪ್ರತಿ ಮನೆಯಲ್ಲಿ ದೀಪ ಬೆಳಗಿಸಿವ ಮೂಲಕ ಭಕ್ತಿಪೂರ್ವಕವಾಗಿ ನಮಿಸಬೇಕು ಎಂದು ರಾಮಮಂದಿರದ ಇತಿಹಾಸವನ್ನು ತಿಳಿಸಿದರು.
ವೇದಿಕೆಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ವಿ.ಜಿ .ಶೆಟ್ಟಿ ವಿಭಾಗದ ಪ್ರಮುಖರಾದ ರಾಮಚಂದ್ರ ಕಾಮತ್, ಸಂಜು ಶೇಟ್, ವಿಶ್ವ ಹಿಂದು ಪರಿಷತ್ ಸಹ ಕಾರ್ಯದರ್ಶಿ ಸಂತೋಷ ನಾಯ್ಕ, ವಿಶ್ವನಾಥ ನಾಯಕ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.