Follow Us On

Google News
Important
Trending

ಕುದಿಯುವ ಎಣ್ಣೆಯ ಸ್ನಾನ, ತೈಲ ಸೇವೆ : ಅಯ್ಯಪ್ಪ ಸ್ವಾಮೀ ಮಾಲಧಾರಿಗಳಿಂದ ಭಕ್ತಿಯ ಪರಾಕಾಷ್ಠೆ

ಕುದಿಯುವ ಎಣ್ಣೆಯಿಂದ ವಡೆ ತಗೆದ ಪುಟ್ಟ-ಪುಟ್ಟ ಮಣಿಕಂಠ ಸ್ವಾಮಿಗಳು

ಹೊನ್ನಾವರ: ಅಯ್ಯಪ್ಪ ಸ್ವಾಮೀ ಮಾಲದಾರಿಗಳಿಂದ ಕುದಿಯುವ ಎಣ್ಣೆಯಿಂದ ವಡೆ ತಗೆಯುವ ಸೇವೆ, ಮತ್ತು ಕುದಿಯುವ ಎಣ್ಣೆಯ ಸ್ನಾನ, ತೈಲ ಸೇವೆ ನಡೆಯಿತು. ಈ ವೇಳೆ ಮಾಲೆದರಿಸಿದ ಪುಟ್ಟ-ಪುಟ್ಟ ಮಣಿಕಂಠ ಸ್ವಾಮಿಗಳು ಕುದಿಯುವ ಎಣ್ಣೆಯಿಂದ ವಡೆ ತಗೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ಹೊನ್ನಾವರ ತಾಲೂಕಿನ ಬಳ್ಕೂರ ಬಳ್ಕೂರ ಅಯ್ಯಪ್ಪ ಸ್ವಾಮೀ ಭಕ್ತ ಮಂಡಳಿಯು 15 ನೇ ವರ್ಷದ ವೃತಾಚರಣೆ ನಡೆಯುತ್ತಿದೆ. ಮಂಡಲ ಪೂಜಾ ಕಾರ್ಯಕ್ರಮದ ಪ್ರಯುಕ್ತ ಅಯ್ಯಪ್ಪ ಸ್ವಾಮೀ ಮಾಲಧಾರಿಗಳಿಂದ ಕುದಿಯುವ ಎಣ್ಣೆಯಿಂದ ವಡೆ ತಗೆಯುವ ಸೇವೆ, ಮತ್ತು ಕುದಿಯುವ ಎಣ್ಣೆಯ ಸ್ನಾನ, ತೈಲ ಸೇವೆ ಸನ್ನಿಧಾನದ ಗುರುಸ್ವಾಮಿ ಮಾದೇವ ಸ್ವಾಮಿ ಮತ್ತು ಇಡಗುಂಜಿ ಸನ್ನಿಧಾನದ ಗುರು ಸ್ವಾಮಿ, ರಾಮ ಗುರುಸ್ವಾಮಿಯವರ ನೇತ್ರತ್ವದಲ್ಲಿ ನಡೆಯಿತು. ಪಡಿ ಪೂಜೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ಮುಂತಾದ ಪೂಜಾ ಕಾರ್ಯಗಳು ನಡೆದವು.

ಶಬರಿಮಲೆ ಅಯ್ಯಪ್ಪನ ದೇವಾಲಯದಲ್ಲಿ ನಡೆಯುವ ವಿಷೇಶ ಪೂಜೆ ಗಳಲ್ಲಿ ಮಂಡಲ ಪೂಜೆ ಅತ್ಯಂತ ವಿಷೇಶವಾಗಿದೆ. ಈ ಹಿನ್ನಲೆಯಲ್ಲಿ ಬಳ್ಕೂರ ಅಯ್ಯಪ್ಪ ಸ್ವಾಮೀ ಮಾಲಧಾರಿಗಳಿಂದ ಕುದಿಯುವ ಎಣ್ಣೆಯಿಂದ ವಡೆ ತಗೆಯುವ ಸೇವೆ, ಮತ್ತು ಕುರಿಯುವ ಎಣ್ಣೆಯ ಸಾನ್ನ ತೈಲ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಇಡಗುಂಜಿ ಸನ್ನಿಧಾನದಿಂದ ಆಗಮಿಸಿದ ಇಡಗುಂಜಿ ಸನ್ನಿಧಾನದ 37 ನೇ ವರ್ಷದ ವೃತದಾರಿ ಗುರು ಸ್ವಾಮಿ, ರಾಮ ಗುರುಸ್ವಾಮಿಯವರನ್ನು ಮಾಲೆದರಿಸಿದ ಅವರ ಪತ್ನಿಯನ್ನು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಇಡಗುಂಜಿ ಸನ್ನಿಧಾನದ ಗುರುಸ್ವಾಮಿ ರಾಮ ಸ್ವಾಮಿ ವಡೆತಗೆಯು ಕಾರ್ಯಕ್ರಮ ಯಶಸ್ವಿಯ್ಯಾಗಿ ನಡೆದಿದೆ, ಅಯ್ಯಪ್ಪ ಸ್ವಾಮಿ ನಮ್ಮೆಲ್ಲಾ ಸ್ವಾಮಿಗಳಿಗೆ ಆರ್ಶಿವಾದ ಮಾಡಿದ್ದಾನೆ, ಬಳ್ಕೂರ ಈ ಸನ್ನಿದಾನ ಸುರ್ಯ-ಚಂದ್ರ ಇರುವವರೆಗೆ ಇದೆರೀತಿ ಮುಂದುವರಿಯಲಿ
ಎಂದರು.

ಬಳ್ಕೂರ ಸನ್ನಿಧಾನದ ಗುರುಸ್ವಾಮಿ ಮಾದೇವ ಸ್ವಾಮಿ ಮಾತನಾಡಿ ಅಯ್ಯಪ್ಪ ಸ್ವಾಮಿ ಇಲ್ಲಿಗೆ ಬಂದಿದಾನೆ ಎನ್ನುವುದಕ್ಕೆ ಈ ಒಡೆ ತಗೆಯುವುದೆ ಸಾಕ್ಷಿ, ಇಂತಹ ಕಾರ್ಯಕ್ರಮದಿಂದ ಇಡಿ ಗ್ರಾಮಕ್ಕೆ ಒಳಿತಾಗುತ್ತದೆ, 18 ವರ್ಷ ಮಾಲೆ ಹಾಕಿದ ಸ್ವಾಮಿಗೆ ಸಿದ್ದಿಪುರುಷ ಎನ್ನುತ್ತಾರೆ . ಅವರು ಗುರುಸ್ಥಾನ ಪಡೆಯುತ್ತಾರೆ, 37 ವರ್ಷ ಮಲೆ ಹಾಕಿದ ಈ ಸ್ವಾಮಿಗಳು ನಮ್ಮ ಸ್ವಾಮಿಗಳು, ಕಳೆದ 2 ವರ್ಷದಿಂದ ಅವರ ಮನೆಯವರು ಮಾಲೆ ದರಿಸಿದ್ದಾರೆ, ಯಾರು ಅಯ್ಯಪ್ಪ ಸ್ವಾಮಿ ಅನ್ನದಾನ ಮಾಡುತ್ತಾರೆ ಅವರಿಗೆ ಅನ್ನಕ್ಕೆ ಕೋರತೆಯಾಗುದಿಲ್ಲಾ, ಪ್ರಸಾದ ಸ್ವೀಕರಿಸಿದ ಎಲ್ಲರ ಜೀವನ ಪಾವನವಾಗುತ್ತದೆ, ಎಲ್ಲಿ ಅನ್ನಧಾನ ನಡೆಯುತ್ತದೆ ಆ ಉರಿಗೆ ಒಳಿತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಲಾದಾರಿಗಳಾದ ಮಾರುತಿ ಸ್ವಾಮಿ, ವಸಂತ ಸ್ವಾಮೀ, ಮಂಜುನಾಥ ಸ್ವಾಮೀ, ರಾಮ ಸ್ವಾಮೀ, ಗಜಾನನ ಸ್ವಾಮೀ, ಈಶ್ವರ ಸ್ವಾಮಿ, ವಿದ್ಯಾದರ ಸ್ವಾಮಿ ಮುಂತಾದ ಸ್ವಾಮೀಗಳು ಇದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button