ಕೋವಿಡ್ ಮಾರ್ಗಸೂಚಿಯಂತೆ ಮುಂಜಾಗೃತ ಕ್ರಮ: ರೋಗ ಲಕ್ಷಣ ಇದ್ದವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರ‍್ಯಾಟ್ ಪರೀಕ್ಷೆ

ಕುಮಟಾ: ತಾಲೂಕಾ ಪಂಚಾಯತ್ ತ್ರೆöÊಮಾಸಿಕ ಕೆ.ಡಿ.ಪಿ ಸಭೆ ಹಾಗೂ ಸಾಮಾನ್ಯ ಸಭೆಯು ಇಂದು ಕುಮಟಾ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕಾ ಪಂಚಾಯತ ಆಡಳಿತಾಧಿಕಾರಿಗಳು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳು ಸಭೆಯ ನಿಗದಿತ ಸಮಯಕ್ಕಿಂತಲೂ ಸುಮಾರು 1 ಘಂಟೆ ತಡವಾಗಿ ಬಂದಿದ್ದು, ಈ ನಿಟ್ಟಿನಲ್ಲಿ ಸಭೆಯನ್ನು ತಡವಾಗಿ ಪ್ರಾರಂಭಿಸಲಾಗಿತ್ತು.

ಈ ವೇಳೆ ಕುಮಟಾ ತಾಲೂಕಾ ಆರೋಗ್ಯಾಧಿಕಾರಿಗಳಾದ ಆಜ್ಞಾ ನಾಯಕ ಅವರು ಮಾತನಾಡಿ, ಇಲಾಖೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಅದೇ ರೀತಿ ದೇಶದಾದ್ಯಂತ ಕರೋನಾ ರೂಪಾಂತರಿ ವೈರಸ್ ಹರಡುವಿಕೆ ಜೋರಾಗಿದ್ದು, ಇದುವರೆಗೆ ನಮ್ಮ ತಾಲೂಕಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಮುಂಜಾಗೃತ ಕ್ರಮವನ್ನು ಕೈಗೊಳ್ಳಲಾಗಿದೆ. ರೋಗ ಲಕ್ಷಣ ಇದ್ದವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರ‍್ಯಾಟ್ ಪರೀಕ್ಷೆ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ ಆರ್.ಟಿ.ಪಿ.ಸಿ.ಆರ್ ತಪಾಸಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಕೆ. ಹೆಗಡೆ ಅವರು ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ 5 ಜಾನುವಾರು ಶಿಬಿರವು ಮುಕ್ತಾಯಗೊಂಡಿದೆ. ಪ್ರಮುಖವಾಗಿ ರೇಬಿಸ್ ಕಾಯಿಲೆಯ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವು ಸಹ ಚಾಲ್ತಿಯಲ್ಲಿದೆ ಎಂದು ತಿಳಿಸಿದರು. ಈ ವೇಳೆ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕರಾದ ವಿನಾಯಕ ವೈದ್ಯ ಅವರು ಮಾತನಾಡಿ, ಶಾಲೆಗಳಿಗೆ ಪೂರೈಕೆಯಾದ ಅಡುಗೆ ಸಾಮಗ್ರಿ ಹಾಗೂ ಅಡುಗೆ ಸಿಬ್ಬಂದಿಗಳ ವೇತನದ ಕುರಿತಾಗಿ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಆಡಳಿತಾಧಿಕಾರಿಗಳಾದ ಎನ್.ಜಿ ನಾಯ್ಕ, ಕಾರ್ಯ ನಿರ್ವಹಣಾಧಿಕಾರಿಗಳಾದ ಆರ್.ಎಲ್ ಭಟ್ ಸೇರಿದಂತೆ ವಿವಿದ ಇಲಾಖ ಅಧಿಕಾರಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Exit mobile version