Important
Trending

ಪುರಾಣ ಪ್ರಸಿದ್ಧ ಧಾರೇಶ್ವರ ದಲ್ಲಿ ಜಟಗೇಶ್ವರ ದೇವರ ಪುನರ್ ಪ್ರತಿಷ್ಠಾ ಕಾರ್ಯ: ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ: ಅಭಯ ಪ್ರಸಾದ ನೀಡಿ ಅನುಗ್ರಹ

ಕುಮಟಾ: ಪುರಾಣ ಪ್ರಸಿದ್ಧ ಶ್ರೀ ಧಾರೇಶ್ವರ ದಲ್ಲಿ ಕ್ಷೇತ್ರದ ಅಧಿದೇವತೆ ಧಾರಾನಾಥನ ಪ್ರಧಾನ ಪರಿವಾರ ದೇವರಾದ ಜಟಗೇಶ್ವರ ದೇವರ ಪುನಃ ಪ್ರತಿಷ್ಠಾ ಕಾರ್ಯ ನೆರವೇರಿತು. ಸಾಯಂಕಾಲ ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಹಾಗೂ ವಿವಿಧ ವಿಧಾನಗಳು ನಡೆದವು. ಬೆಳಿಗ್ಗೆ ಧನುರ್ಲಗ್ನದ ಶುಭ ಮುಹೂರ್ತದಲ್ಲಿ ಪುನಃ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ತದನಂತರ ಆಗಮೋಕ್ತ ರೀತ್ಯಾ ಪ್ರಾಣಪ್ರತಿಷ್ಠಾ ಕಾರ್ಯ ನಡೆದವು. ಕಲಾವೃದ್ಧಿ ಹವನಾದಿಗಳು ಹಾಗೂ ಬ್ರಹ್ಮಕಲಶ ಅಭಿಷೇಕಗಳ ನಂತರ ಮಹಾಪೂಜೆ ಮಹಾ ಪ್ರಾರ್ಥನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ದೇವಸ್ಥಾನದ ಅರ್ಚಕರು ದೇವಾಲಯದ ತಂತ್ರಿಗಳಾದ ಸೋಮಯಾಜಿ ಗಳ ಆಚಾರ್ಯತ್ವದಲ್ಲಿ ಈ ಎಲ್ಲ ಕಾರ್ಯಗಳನ್ನು ಪೂರೈಸಿದರು.

ಮಹಾಪೂಜೆ ಹಾಗೂ ಗ್ರಾಮ ರಾಷ್ಟ್ರಗಳ ಶ್ರೇಯಸ್ಸಿಗಾಗಿ ಪ್ರಾರ್ಥಿಸುವಾಗ ಶ್ರೀ ದೇವರು ಅಭಯ ಪ್ರಸಾದವನ್ನು ಅನುಗ್ರಹಿಸುವ ಸನ್ನಿವೇಶವನ್ನು ನೂರಾರು ಭಕ್ತಾದಿಗಳು ಕಣ್ತುಂಬಿಕೊoಡರು. ಈ ಮೂಲಕ ಬಾಗಿಲ ಜಟಗ ದೇವರು ಎಂದೇ ಪ್ರಸಿದ್ಧವಾದ ದೇವರ ಪೂಜಾ ಕಾರ್ಯಗಳು ಸುಸಂಪನ್ನ ಗೊಂಡಿದುದರ ಬಗ್ಗೆ ಭಕ್ತಾದಿಗಳು ಕೃತಾರ್ಥರಾದರು. ನಂತರ ಸಾರ್ವತ್ರಿಕ ಅನ್ನು ಸಂತರ್ಪಣೆ ನಡೆದು ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button