Important
Trending

ಉತ್ತರಕನ್ನಡದಲ್ಲಿ ಇಂದು 89 ಕರೊನಾ ಕೇಸ್

ಜಿಲ್ಲೆಯಾದ್ಯಂತ 126 ಮಂದಿ ಬಿಡುಗಡೆ
243 ಮಂದಿಗೆ ಹೋಮ್ ಐಸೋಲೇಷನ್

ಉತ್ತರಕನ್ನಡದಲ್ಲಿ ಇಂದು 89 ಜನರಿಗೆ ಕರೊನಾ ಕಾಣಿಸಿಕೊಂಡಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರದಲ್ಲಿ 13, ಕುಮಟಾ 5, ಹೊನ್ನಾವರ 18, ಭಟ್ಕಳ 10 , ಶಿರಸಿ 12, ಯಲ್ಲಾಪುರ 5, ಹಳಿಯಾಳದಲ್ಲಿ 26 ಪ್ರಕರಣ ದೃಢಪಟ್ಟಿದೆ.

ಜಿಲ್ಲೆಯಾದ್ಯಂತ 126 ಮಂದಿ ಬಿಡುಗಡೆ

ಇದೇ ವೇಳೇ, ಇಂದು 126 ಜನರು ಇಂದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಕಾರವಾರ 14, ಕುಮಟಾ 3, ಹೊನ್ನಾವರ 7, ಭಟ್ಕಳ 11, ಶಿರಸಿ 13, ಸಿದ್ದಾಪುರ 22, ಯಲ್ಲಾಪುರ 1, ಮುಂಡಗೋಡ 13, ಹಳಿಯಾಳದಲ್ಲಿ 42 ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು 89 ಪ್ರಕರಣ ದಾಖಲಾದ ಬೆನ್ನಲ್ಲೆ ಸೋಂಕಿತರ ಸಂಖ್ಯೆ 3776ಕ್ಕೆ ಏರಿಕೆಯಾಗಿದೆ. ಇದುವರೆಗೂ 38 ಮಂದಿ ಸಾವನ್ನಪ್ಪಿದ್ದಾರೆ. 243 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2907 ಜನ ಈವರೆಗೆ ಗುಣಮುಖರಾದವರಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button