Big News
Trending

ವೀರಸಾವರ್ಕರ್ ನಾಮಫಲಕ ಮತ್ತು ಧ್ವಜ ಅಳವಡಿಕೆ ವಿಚಾರ : ಪೋಲೀಸ್ ಸಮ್ಮುಖದಲ್ಲಿಯೇ ತೆರವುಗೊಳಿಸಲಾದ ಧ್ವಜಕಟ್ಟೆಯನ್ನು ಪುನಃ ನಿರ್ಮಿಸಿದ ಹಿಂದು ಮುಖಂಡರು

ಭಟ್ಕಳ: ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೀರ ಸಾವರ್ಕರ ನಾಮಫಲಕವನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿಯು ಪೋಲಿಸ್ ಬಂದೋಬಸ್ತನಲ್ಲಿ ಏಕಾಏಕಿ ತೆರವುಗೊಳಿಸಿದ್ದರು. ಇದನ್ನು ಪಂಚಾಯತ ಸದಸ್ಯರು ಪ್ರಶ್ನಿಸಿ ಪತ್ರಿಭಟನೆ ನಡೆಸಿ ಅಧಿಕಾರಗಳಿಂದ ಸೂಕ್ತ ಉತ್ತರ ಬಾರದ ಹಿನ್ನೆಲೆ ಪುನಃ ಸಂಜೆ ವೇಳೆ ಧ್ವಜ ಸ್ಥಂಬ ಕಟ್ಟಿದ ಘಟನೆ ನಡೆದಿದೆ.

ಜನವರಿ 27 ಶನಿವಾರದಂದು ತಾಲೂಕಿನ ತೆಂಗಿನಗುoಡಿ ಬಂದರು ಸಮೀಪ ಬೀಚ್ ಬಳಿ ಸಾವರ್ಕರ್ ಬೀಚ್ ಎಂದು ಬರೆದ ಬೋರ್ಡನ್ನು ನಿಲ್ಲಿಸಿ ಅದೇ ಕಂಬಕ್ಕೆ ಕೇಸರಿ ಬಟ್ಟೆಯನ್ನು ಸುತ್ತಿ ಭಗದ್ವಜವನ್ನು ಹಾಕಲಾಗಿದ್ದು, ಈ ವಿಷಯವು ಹೆಬಳೆ ಪಂಚಾಯತ ಪಿ.ಡಿ.ಒ. ಅವರಿಗೆ ತಿಳಿದು ಅವರು ಸರಕಾರಿ ರಜೆಯ ಮಧ್ಯೆಯು ಪೊಲೀಸ್ ಬಂದೋಬಸ್ತನಲ್ಲಿ ತಮ್ಮ ಸಿಬ್ಬಂದಿಗಳೊoದಿಗೆ ಸ್ಥಳಕ್ಕೆ ಹೋಗಿ ಹಾಕಲಾದ ಬೋರ್ಡ್, ಭಗವಾ ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದರು.

ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಅನಧಿಕೃತವಾಗಿರುವ ನಾಮಫಲಕವನ್ನು ತೆರವುಗೊಳಿಸಿ ಎಂಬುದಾಗಿ ಬಂದ ದೂರಿನ ಅರ್ಜಿಯನ್ನು ಚರ್ಚಿಸಿ ಅತಿ ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸಲು ಅಧ್ಯಕ್ಷರು ಹಾಗೂ ಸದಸ್ಯರು ಪಿಡಿಓಗಳಿಗೆ ಸೂಚಿಸಿದ್ದರು. ಆದರೆ ಪಂಚಾಯತ ಪಿಡಿಓ ಮತ್ತು ಅಧಿಕಾರಿಗಳು ಅಂತಹ ನಾಮಫಲಕ ತೆರವುಗೊಳಿಸದೇ ಏಕಾಏಕಿ ತೆಂಗಿನಗುAಡಿ ಬೀಚ್ ನಲ್ಲಿ ಹಾಕಲಾದ ನಾಮಫಲಕ ತೆರವಿಗೆ ಮುಂದಾಗಿದ್ದರು.

ಈ ವಿಚಾರವಾಗಿ ಹೆಬಳೆ 12 ಸದಸ್ಯರು, ಪಿಡಿಓ ಕ್ರಮದ ವಿರುದ್ದ ಧರಣಿ ಕುಳಿತರು. ಸತತ 2 ಗಂಟೆಗಳ ಕಾಲ ಧರಣಿ ಕುಳಿತಿದ್ದರು ಸಹ ಯಾವುದೇ ಸ್ಪಂದನೆ ಬಂದಿರಲಿಲ್ಲ. ಸಂಜೆ 4 ಗಂಟೆಯ ತನಕ ಧರಣಿ ನಡೆಸಿದ ಸದಸ್ಯರು ಆ ಬಳಿಕ ತೆಂಗಿನಗುoಡಿ ಬೀಚ್ ಬಳಿ ತೆರವು ಮಾಡಿದ್ದ ಧ್ವಜ ಸ್ಥಂಭದ ಕಟ್ಟೆಯನ್ನು ಸಾರ್ವಜನಿಕರು ಹಾಗೂ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಪುನಃ ನಿರ್ಮಿಸಿದರು.

ಸ್ಥಳಕ್ಕೆ ಬಂದ ತಹಸೀಲ್ದಾರ ತಿಪ್ಪೇಸ್ವಾಮಿ ಅವರು ಪ್ರತಿಭಟನಾಕಾರರ ಜೊತೆಗೆ ಚರ್ಚಿಸಿದರು. ಈ ವೇಳೆ ಹೆಬಳೆ ಗ್ರಾಮ ಪಂಚಾಯತಿ ಸಭೆಯಲ್ಲಿ ತೀರ್ಮಾನಿಸಿದಂತೆ ಅನಧೀಕೃತ ನಾಮಫಲಕ ತೆರವಿಗೆ 15 ದಿನದ ಕಾಲಾವಕಾಶ ನೀಡಿದ್ದು ನಂತರ ಅವೆಲ್ಲವು ಖುಲ್ಲಾ ಆದ ಬಳಿಕ ವೀರಸಾವರ್ಕರ ಬೀಚನ ಕಟ್ಟೆ ಮತ್ತು ನಾಮ ಫಲಕದ ವಿಚಾರ ಮುಂದುವರೆಯಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು.

ಇದೇ ವೇಳೆ ಪ್ರತಿಭಟನಾಕಾರರು ಧ್ವಜ ಕಟ್ಟೆ ಪುನಃ ನಿರ್ಮಿಸಿದರು. ನಂತರ ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಮಾತನಾಡಿ ‘ ಉಳಿದೆಲ್ಲ ಅನಧೀಕ್ರತ ನಾಮಫಲಕ ತೆರವು ಮಾಡುವ ತನಕ ಈಗ ನಿರ್ಮಿಸಲಾದ ಧ್ವಜ ಕಟ್ಟೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. 15 ದಿನದ ಮುಂಚಿತವಾಗಿ ನೋಟಿಸ್ ನೀಡಿ ತೆರವು ಮಾಡಬೇಕಾಗಿದ್ದ ಪಿಡಿಓ ಅಧಿಕಾರಿಗಳು ಏಕಾಏಕಿ ತೆರವು ಮಾಡಿರುವುದು ಅಪರಾಧ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹೆಬಳೆ ಪಂಚಾಯತ ಅಧ್ಯಕ್ಷೆ ಪಾರ್ವತಿ ನಾಯ್ಕ ಮಾತನಾಡಿ, ‘ತೆಂಗಿನಗುoಡಿ ಬೀಚ್ ಬಳಿ ಹಾಕಿರುವ ಬೋರ್ಡ್ ತೆರವು ಮಾತ್ರ ಮಾಡಲಾಗುವುದು ಎಂದು ತಿಳಿಸಿದ ಪಿಡಿಓಗಳು ಏಕಾಏಕಿ ಕಟ್ಟೆಯನ್ನು ಸಹ ತೆರವು ಮಾಡಿದ್ದಾರೆ. ನನ್ನ ಗಮನಕ್ಕೆ ತಾರದೇ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಯಾವುದೇ ನೋಟಿಸ್ ನೀಡದೇ ಹಾಗೂ ಪಂಚಾಯತ್ ಅಧ್ಯಕ್ಷರಿಗೂ, ಸದಸ್ಯರ ಗಮನಕ್ಕೂ ತಾರದೆ ತೆರವುಗೊಳಿಸಿರುವುದಕ್ಕೆ ಅವರ ಮೇಲೆ ಕ್ರಮಕ್ಕೆ ಆಗ್ರಹಿಸುತ್ತೇವೆ. ಈ ನಾಮಫಲಕ ಅಳವಡಿಕೆಯಲ್ಲಿ ಸಾರ್ವಜನಿಕರ ಯಾರದ್ದು ದೂರು ತಕರಾರು ಇಲ್ಲದೇ ಪಿಡಿಒಗಳು ತೆರವು ಮಾಡಿರುವುದು ಸರಿಯಲ್ಲ ಇದಕ್ಕೆ ಅಧ್ಯಕ್ಷ, ಸದಸ್ಯರ ವಿರೋಧ ಇದೆ ಎಂದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button