ಹೆಚ್ಚಿದ ಮಂಗನ ಕಾಯಿಲೆ ಆತಂಕ: ಒಂದೇ ದಿನದಂದು 8 ಹೊಸ ಕೇಸ್ ದಾಖಲು: ಇದುವರೆಗೆ 16 ಪ್ರಕರಣ ಪತ್ತೆ

ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಇದುವರೆಗೆ ಮಂಗನ ಕಾಯಿಲೆಯ 16 ಪ್ರಕರಣಗಳು ವರದಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತಿಚೆಗೆ ಒಂದೇ ದಿನ ಸಿದ್ದಾಪುರ ತಾಲೂಕಿನಲ್ಲಿ 8 ಹೊಸ ಮಂಗನ ಕಾಯಿಲೆಯ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಗನ ಕಾಯಿಲೆ ಸೋಂಕಿತ ಒಂದು ಮಗು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದೆ. ಉಳಿದಂತೆ 7 ಸೋಂಕಿತರು ಸಿದ್ದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಅವರ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಂಗನ ಕಾಯಿಲೆಯ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ದಾಪುರ ತಾಲೂಕಿಯ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಕೂಡಾ ನಿರ್ಮಿಸಲಾಗುತ್ತಿದೆ.

ಸಾಮಾನ್ಯವಾಗಿ ಈ ಮಂಗನ ಕಾಯಿಲೆಯು ಜನವರಿಯಿಂದ ಜೂನ್ ವರೆಗೆ ಇರುತ್ತದೆ. ಹೀಗಾಗಿ ಈ ಹಿಂದೆ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆಯ ಪ್ರಕಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಂಗನ ಕಾಯಿಲೆಯಿಂದ ಸುರಕ್ಷಿವಾಗಿರಲು ಒಣಗುಗಳು ಹತ್ತರ ಬಾರದಂತೆ ಕೈಕಾಲುಗಳಿಗೆ ಹಚ್ಚಿಕೊಳ್ಳಲು 11 ಸಾವಿರಕ್ಕೂ ಅಧಿಕ ಔಷಧಿ ಬಾಟಲಿಗಳು ಉತ್ತರ ಕನ್ನಡ ಜಿಲ್ಲೆಗೆ ಈಗಾಗಲೆ ಪೂರೈಕೆ ಆಗಿದೆ. ಆದರೂ ಜಿಲ್ಲೆಗೆ ಸುಮಾರು 50 ಸಾವಿರದಷ್ಟು ಬಾಟಲಿಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version