ಅಂಕೋಲಾ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಶಕ್ತಿ ಕೇಂದ್ರ ಶ್ರೀ ಕ್ಷೇತ್ರ ಕೊಗ್ರೆ,ಅಷ್ಟಬಂಧ ಮಹೋತ್ಸವಕ್ಕೆ ಇಂದಿನಿಂದ ತೆರೆದು ಕೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶುಭಾರಂಭಗೊಳ್ಳಲಿದೆ. ಫೆ 12 ರ ಸೋಮವಾರ ಬೆಳಿಗ್ಗೆ 8:30 ಗಂಟೆಯಿಂದ ಪ್ರಾರ್ಥನೆ , ನಾಂದಿ , ಇಂದ್ರ ಪ್ರತಿಷ್ಠೆ , ನಿತ್ಯ ವಿಧಿ ಸಹಿತ ಪುಣ್ಯಾಹವಾಚನ , ಕಂಕಣ ಬಂಧನ , ತೋರಣ ಮುಹೂರ್ತ , ಧ್ವಜಾರೋಹಣ , ಬಲಿ ಪೀಠ ಸ್ಥಾಪನೆ , ಅಖಂಡ ದೀಪ ಸ್ಥಾಪನೆ , ತುಳಸಿ ಪ್ರತಿಷ್ಠೆ , ಗೋಪೂಜೆ ಸಂಜೆ 4:30 ಗಂಟೆಯಿಂದ ವಾಸ್ತು ಮಂಡಲ ಆರಾಧನೆ , ನವಪದ ವಾಸ್ತು (ಕಳಸದ ಮನೆ) ವಾಸ್ತು ರಾಶೋಘ್ನ ಹವನ , ದಿಕ್ಪಾಲಕರ ಆಹ್ವಾನ , ಹವನ ಬಲಿ ನಡೆಯಲಿದೆ.
ಫೆ 12 ರಿಂದ 16 ರ ವರೆಗೆ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ- ಧನ ಸಹಾಯ ಸಹಕಾರ ನೀಡಬೇಕಾಗಿ, ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ದೇಗುಲ ನವೀಕರಣ ಸಮಿತಿ ಪದಾಧಿಕಾರಿಗಳು
ಕಾರ್ಯಕಾರಿ ಮಂಡಳಿ ಸದಸ್ಯರು ಹಾಗು ಊರ ನಾಗರಿಕರು ವಿನಂತಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ