Important
Trending

Kogre Bommayya Devastana: ಶ್ರೀ ಕ್ಷೇತ್ರ ಕೊಗ್ರೆ ಬೊಮ್ಮಯ್ಯ ದೇವರ ಅಷ್ಟಬಂಧ ಮಹೋತ್ಸವ

ಅಂಕೋಲಾ: ಶಕ್ತಿ ಕೇಂದ್ರ ಶ್ರೀ ಕ್ಷೇತ್ರ ಕೊಗ್ರೆ, ( Kogre Bommayya Devastana) ಅಷ್ಟಬಂಧ ಮಹೋತ್ಸವಕ್ಕೆ ಫೆ 12 ರಿಂದ ಶುಭಾರಂಭಗೊಂಡಿದೆ, ಫೆ 12 ರ ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಪ್ರಾರ್ಥನೆ , ನಾಂದಿ , ಇಂದ್ರ ಪ್ರತಿಷ್ಠೆ , ನಿತ್ಯ ವಿಧಿ ಸಹಿತ ಪುಣ್ಯಾಹವಾಚನ , ಕಂಕಣ ಬಂಧನ , ತೋರಣ ಮುಹೂರ್ತ , ಧ್ವಜಾರೋಹಣ , ಬಲಿ ಪೀಠ ಸ್ಥಾಪನೆ , ಅಖಂಡ ದೀಪ ಸ್ಥಾಪನೆ , ತುಳಸಿ ಪ್ರತಿಷ್ಠೆ , ಗೋಪೂಜೆ ಮತ್ತಿತರ ಧಾರ್ಮಿಕ ವಿಧಿ ವಿಧಾನ ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನದ ವರೆಗೆ ಸಾಂಘವಾಗಿ ನೆರವೇರಿದವು, ಪ್ರವೇಶ ದ್ವಾರ, ಶಿಲಾಮಯ ಹೆಬ್ಬಾಗಿಲು, ಶಿಲಾಮಯ ಸ್ವಾಗತ ಗೋಪುರಗಳನ್ನು ಲೋಕಾರ್ಪಣೆಗೊಳಿಸಲಾಯಿತು.ದಾನಿಗಳ ಕುಟುಂಬಸ್ಥರು, ವಿಶೇಷ ಸೇವೆ ಹಾಗೂ ಕಾಣಿಕೆ ನೀಡಿದ ಮಹನೀಯರು, ಸ್ಥಳೀಯ ಪ್ರಮುಖರು, ಭಕ್ತಾದಿಗಳು ಪಾಲ್ಗೊಂಡಿದ್ದರು. ಧರಣೇಂದ್ರ ಜೈನ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಸಾಂಘವಾಗಿ ನೆರವೇರುತ್ತಿದ್ದು, ಶ್ರೀ ಕ್ಷೇತ್ರ ಭಕ್ತರ ಕಣ್ಮನ ಸೆಳೆಯುತ್ತಿದೆ.

ಸಂಜೆ 4:30 ಗಂಟೆಯಿಂದ ವಾಸ್ತು ಮಂಡಲ ಆರಾಧನೆ , ನವಪದ ವಾಸ್ತು (ಕಳಸದ ಮನೆ) ವಾಸ್ತು ರಾಶೋಘ್ನ ಹವನ , ದಿಕ್ಪಾಲಕರ ಆಹ್ವಾನ , ಹವನ ಬಲಿ ಮತ್ತಿತರ ಧಾರ್ಮಿಕ ವಿಧಿವಿಧಾನ ನಡೆಯುತ್ತಿದೆ. ನಾಳೆ ಫೆ 13 ರಂದು ಬೆಳಿಗ್ಗೆ ನಿತ್ಯ ವಾಸ್ತು ವಿಧಾನ, ಸರ್ವದೋಷ ನಿವಾರಣಾ ಆರಾಧನೆ, ವಜ್ರ ಪಂಜರ ಆರಾಧನೆ, ಋುಷಿ ಮಂಡಲ ಆರಾಧನೆ ನಡೆಯಿಲಿದೆ.

ಸಂಜೆ 4 ಗಂಟೆ ನಂತರ ಬಾಸಗೋಡದ ಗಾಂಧಿ ಮಂದಿರದ ಎದುರಿನಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಕೋಗ್ರೆ ದೇವಸ್ಥಾನದ ಆವರಣದವರೆಗೆ ಬ್ರಹ್ಮ ಕಳಸ ಮೆರವಣಿಗೆ ನಡೆಯ ಲಿದ್ದು, ಚಂಡೆ ಮೇಳ, ಪಂಚವಾದ್ಯ, ಗುಮಟೆ ಪಾಂಗ್ ಮತ್ತಿತರ ವಾದ್ಯ ಮೇಳ, ಶ್ರೀ ವೆಂಕಟರಮಣ ಸ್ಥಬ್ದ ಚಿತ್ರ, ವೀರ ಹನುಮ, ಯಕ್ಷ ಪಾತ್ರಧಾರಿಗಳು, ಮತ್ತಿತರ ವೇಷ ಭೂಷಣಗಳು, ರೂಪಕ ಪ್ರದರ್ಶನವಿದೆ.ಮಹಿಳೆಯರಿಂದ ಪೂರ್ಣ ಕುಂಭ ಮೇರವಣಿಗೆ ಇದ್ದು ಸುತ್ತಮುತ್ತಲ ಎಲ್ಲಾ ಗ್ರಾಮಸ್ಥರು, ಹಾಗೂ ಶ್ರೀ ಕೊಗ್ರೆ ಬೊಮಯ್ಯ ದೇವ ಮತ್ತು ಪರಿವಾರ ದೇವರ ಭಕ್ತರೆಲ್ಲರಿಗೂ ಪಾಲ್ಗೊಳ್ಳುವ ಸದಾವಕಾಶವಿದೆ.

( Kogre Bommayya Devastana) ಈ ವರೆಗೆ ತನು ಮನ ಧನ ಸಹಾಯ ಸಹಕಾರ ಸಲ್ಲಿಸಿದ ಸರ್ವರನ್ನು ಕೃತಜ್ಞತಾ ಪೂರ್ವಕವಾಗಿ ನೆನೆದು, ಫೆ 12 ರಿಂದ 16 ರ ವರೆಗೆ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತ್ತಷ್ಟು ಸಹಕಾರ ನೀಡಬೇಕಾಗಿ, ಶ್ರೀ ಕೊಗ್ರೆ ಬೊಮ್ಮಯ್ಯ ದೇವರ ದೇಗುಲ ನವೀಕರಣ ಸಮಿತಿಯವರು ವಿನಂತಿಸಿದ್ದಾರೆ. ಪ್ರತಿದಿನ ಶ್ರೀ ಕ್ಷೇತ್ರದ ಕಾರ್ಯಕ್ರಮಗಳ ನೇರ ಪ್ರಸಾರ Lucky Boys ಭಾವಿಕೇರಿ ಯೂಟ್ಯೂಬ್ ಚಾನೆಲನಲ್ಲಿ ಬಿತ್ತರಗೊಳ್ಳುತ್ತಿದ್ದು , ಪ್ರತಿದಿನ ನೇರ ಪ್ರಸಾರದ ಪ್ರತ್ಯೇಕ ಲಿಂಕ್ ಬಿಡಲಾಗುತ್ತಿದ್ದು , ತಾವೆಲ್ಲರೂ ಆ ಲಿಂಕ್ ಮೂಲಕ ಕ್ಷೇತ್ರ ದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ವಿಸ್ಮಯ ಟಿವಿ ವಾಹಿನಿ ಮೀಡಿಯಾ ಪಾರ್ಟನರ್ ಆಗಿ ಪ್ರಚಾರದ ವಿಶೇಷ ಸೇವೆ ಸಲ್ಲಿಸುತ್ತಿದೆ.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Back to top button