Focus News
Trending

ಯಶಸ್ವಿಯಾಗಿ ನಡೆದ ಉದ್ಯೋಗ ಮೇಳ

ಹೊನ್ನಾವರ: ತಾಲೂಕಿನ ಅರೇ ಅಂಗಡಿಯ ಸಿರಿ ಬಿ ಎಸ್ ಡಬ್ಲ್ಯೂ ಪದವಿ ಕಾಲೇಜ್ ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ಸಹಯೋಗದೊಂದಿಗೆ ಕಾಲೇಜಿನಲ್ಲಿ ಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಿತು. ಸಾಂಕೇತಿಕವಾಗಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಯಕ್ರಮದ ಆಯೋಜಕರಾದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಅರುಣ್ ನಾಯ್ಕ ಗಿಡಕ್ಕೆ ನೀರುಣಿಸುವುದರ ಮೂಲಕ ನೆರವೇರಿಸಿದರು.

ನಂತರ ಮಾತನಾಡಿ ಜಿಲ್ಲೆಯ ಏಕೈಕ ಸಮಾಜ ಕಾರ್ಯ ಶಿಕ್ಷಣ ಹೊಂದಿರುವ ಕಾಲೇಜು ನಮ್ಮದಾಗಿದೆ. ಇಲ್ಲಿ ರ್ಯಾಂಕ್ ಪಡೆದ ಅನೇಕ ವಿದ್ಯಾರ್ಥಿಗಳಿದ್ದಾರೆ. ಈ ಹಿಂದೆ ಅನೇಕ ವಿವಿಧ ರೀತಿಯ ಕ್ಯಾಂಪ್ ಮಾಡಿದ್ದೇವೆ. ಉದ್ಯೋಗ ಮೇಳ ಇದೇ ಮೊದಲ ಬಾರಿಯಾಗಿದೆ. ಅನೇಕ ಸ್ಥಳೀಯ ವಿದ್ಯಾವಂತರು ಉದ್ಯೋಗವಿಲ್ಲದಿದ್ದಾರೆ. ಹಾಗಾಗಿ ಗ್ರಾಮೀಣ ಮಟ್ಟದಲ್ಲಿ ಈ ಉದ್ಯೋಗ ಮೇಳ ಆಯೋಜಿಸಿದ್ದೇವೆ ಎಂದರು.

ಸನ್ ಇಂಡಿಯಾ ಕಂಪನಿ ಎಚ್ ಆರ್ ವಿರೂಪಾಕ್ಷಪ್ಪ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಇಂದು ಉದ್ಯೋಗ ಮೇಳ ನಡೆದಿದೆ. ಪುರುಷ ಅಥವಾ ಮಹಿಳೆ ಉದ್ಯೋಗ ಹೊಂದಿದರೆ ಮಾತ್ರ ಜೀವನ ಎದುರಿಸಲು ಸಾಧ್ಯವಾಗುತ್ತದೆ. ಇಂದು ಜೀವನ ಎನ್ನುವುದು ಕ್ಲಿಷ್ಟಕರವಾಗಿದ್ದು, ಖರ್ಚಿನಿಂದ ಕೂಡಿದೆ.ಹಾಗಾಗಿ ಉದ್ಯೋಗ ಹೊಂದಬೇಕಾದ ಅನಿವಾರ್ಯವಿದೆ.ಕರಾವಳಿ ಭಾಗದ ಜನ ಬೆಂಗಳೂರಿನoತಹ ನಗರಕ್ಕೆ ಬರಲು ಹಿಂಜರಿಯುತ್ತಿದ್ದಾರೆ.ಅವಕಾಶ ಸಿಕ್ಕಾಗ ಸದ್ಭಳಕೆ ಮಾಡಿಕೊಂಡಾಗ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಉದ್ಯೋಗಾಕಾoಕ್ಷಿ ಯುವಕ-ಯುವತಿಯರಿಗೆ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಬ್ಯಾಂಕ್ ಹಾಗೂ ಎಂಎನ್ ಸಿ ಕಂಪನಿಗಳಿಗೆ ನೇರ ನೇಮಕ ಹೊಂದುವ ಅವಕಾಶ ನೀಡಲಾಗಿತ್ತು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button