ನಿಯೋಜಿತ ಯತಿಗಳ ಪರುಪ್ರವೇಶ: ಸ್ವರ್ಣವಲ್ಲಿ ಮಠಕ್ಕೆ ಆಗಮಿಸಿದ ನಾಗರಾಜ್ ಭಟ್ಟರು
ದಾರಿಯೂದ್ದಕ್ಕೂ ಭಕ್ತರ ಹರ್ಷೋದ್ಘಾರ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ದ ಗುರುಪಂಪರೆಯ ಬೆಳಕಿನಲ್ಲಿ ಬೆಳೆದುಬಂದ ಶಿಷ್ಯ ಕೋಟಿಯನ್ನು ಅನುಗ್ರಹಿಸಿ ಆಶಿರ್ವಧಿಸುತ್ತೀರುವ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿಗಳ ನೂತನ ಶಿಷ್ಯರ ಪುರ ಪ್ರವೇಶ ಕಾರ್ಯಕ್ರಮ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಯಲ್ಲಾಪುರ ತಾಲೂಕಿನ ಈರಾಪುರದ ವಿ.ನಾಗರಾಜ ಭಟ್ ಅವರು ಸ್ವರ್ಣವಲ್ಲಿ ಶ್ರೀಗಳ ನೂತನ ಶಿಷ್ಯರಾಗಿ ಶಿಷ್ಯ ಸ್ವೀಕಾರ ಮಾಡಲು ಶ್ರೀ ಮಠಕ್ಕೆ ಆಗಮಿಸಿದರು. ಪೂರ್ಣಕುಂಭ ಸ್ವಾಗತ ದೊಂದಿಗೆ ಸಹಸ್ರಾರು ಶಿಷ್ಯರ ಸಮ್ಮುಖದಲ್ಲಿ ಶ್ರೀಮಠ ವನ್ನು ಆಗಮಿಸಿದ ವಿ.ನಾಗರಾಜ ಭಟ್ ಅವರನ್ನು ಸ್ವರ್ಣವಲ್ಲಿ ಶ್ರೀಗಳು ಸ್ವಾಗತಿಸಿದರು. ಶ್ರೀಗಳೊಂದಿಗೆ ಶ್ರೀ ಮಠದ ಆರಾಧ್ಯ ದೈವ ವಾದ ರಾಜರಾಜೇಶ್ವರಿ, ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ನಂತರ ಶ್ರೀ ಗುರುಮೂರ್ತಿ ಮಂದಿರಕ್ಕೆ ತೆರಳಿ, ಪೂಜೆ ಸಲ್ಲಿಸಿದರು.
ನಂತರ ಆಶಿರ್ವಚನ ನೀಡಿದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿಗಳು ನಮ್ಮೆಲ್ಲರ ಅಪೇಕ್ಷೆಯಂತೆ ಯೋಗ್ಯವಂತ ಶಿಷ್ಯರು ನಮಗೆ ದೊರೆತ ಎಂದಿದ್ದಾರೆ. ಶ್ರೀಮಠದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಇದಾಗಿದೆ.. ಸಾಧನೆ ಮತ್ತು ಬೋಧನೆ ಇದುವೆ ಗುರು ಪೀಠದ ಪರಂಪರೆ. ಕೇವಲ ಸಾಧನೆ ಇದ್ದರೆ ಸಾಧಕರಾಗುತ್ತಾರೆ. ಬೋಧನೆ ಇದ್ದರೆ ಪ್ರವಚನಕಾರಾಗುತ್ತಾರೆ. ವೈಯಕ್ತಿಕ ಸಾಧನೆ ಮೂಲಕ ಲೋಕದ ಹಿತ ಕಾಯುವುದು ಇರುತ್ತದೆ. ಬ್ರಹ್ಮಾಂಡದ ಸೃಷ್ಟಿಯಲ್ಲಿ ಸೂರ್ಯ ಮಂಡಲ ದಾಟಿ, ಬ್ರಹ್ಮ ಲೋಕಕ್ಕೆ ಹೋಗುವವರು ಸನ್ಯಾಸಿಗಳು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರು ಮಾತ್ರ. ಗುರು ಪರಂಪರೆಯ ಸನ್ಯಾಸಿಯಾಗುವುದು ಬಹಳ ವಿಶೇಷವಾಗಿದ್ದು, ಆದರೆ ಪರಂಪರೆ ಚೆನ್ನಾಗಿ ಮುಂದುವರೆಯಬೇಕು ಎಂದರು.
ನೂತನ ಶಿಷ್ಯರನ್ನು ಹುಡುಕಾಟ ನಡೆಸಲು ಪ್ರಾರಂಭಿಸಿ, ಐದು ವರ್ಷವಾಗಿತ್ತು. ಕೈಯಲ್ಲಿ ರತ್ನ ಹಿಡಿದುಕೊಂಡು ಊರೆಲ್ಲ ಹುಡುಕಿದಂತಾಗಿತ್ತು. ಆ ನಂತರ ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಮಠದಲ್ಲಿಯೇ ಉತ್ತರಾಧಿಕಾರಿ ಲಭಿಸಿರುವುದು ಪುಣ್ಯ. ನಾಗರಾಜ ಭಟ್ಟ ಅವರನ್ನು ಬೇರೆ ಮಠದವರು ಸಹ ಕೇಳಿದ್ದರು. ಆದರೆ ನಾವು ಅವರನ್ನು ಬಿಟ್ಟುಕೊಡದೇ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲು ತೀರ್ಮಾನಿಸಿದ್ದೇವು. ಈಗ ಕಾಲ ಕೂಡಿ ಬಂದಿರುವುದು ಬಹಳ ವಿಶೇಷವಾಗಿದೆ ಎಂದರು.
ನೂತನ ಉತ್ತರಾಧಿಕಾರಿ ನಾಗರಾಜ ಭಟ್ಟರ ತಂದೆ-ತಾಯಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ, ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಾಗರಾಜ ಭಟ್ಟರ ತಂದೆ ಗಣಪತಿ ಭಟ್ಟ, ತಾಯಿ ಭುವನೇಶ್ವರಿ ಭಟ್ಟ, ಸಹೋದರ ಲಕ್ಷ್ಮೀಕಾಂತ ಭಟ್ಟ ಸೇರಿದಂತೆ ಮಠದ ಪುರೋಹಿತರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಶಿರಸಿ