Idagunji Jatre: ಪುರಾಣ ಪ್ರಸಿದ್ಧ ಇಡಗುಂಜಿ ಮಹಾಗಣಪತಿಯ ಜಾತ್ರೆ: ರಥ ಎಳೆದು ಪುನೀತರಾದ ಭಕ್ತರು

ಹೊನ್ನಾವರ: ತಾಲೂಕಿನ ಪ್ರಸಿದ್ಧ ಇಡಗುಂಜಿ ಮಹಾಗಣಪತಿಯ ಜಾತ್ರೆ (Idagunji Jatre) ಅತ್ಯಂತ ವಿಜೃಂಭಣೆಯಿoದ ನಡೆಯಿತು. ಅಪಾರ ಸಂಖ್ಯೆಯ ಭಕ್ತರು, ರಥವನ್ನು ಎಳೆದು ಪುನೀತರಾದರು. ದೇವರಿಗೆ ಹರಕೆ, ವಿಶೇಷ ಪೂಜೆ ಸಲ್ಲಿಸಿದರು. ಋಷಿ ಮುನಿಗಳಿಂದ ಪೂಜಿಸಲ್ಪಟ್ಟ, ಆಳರಸರಿಂದ ಆರಾಧಿಸಲ್ಪಟ್ಟ ಮಹಾಗಣಪತಿ ಇಂದಿಗೂ ಭಕ್ತರ ಪಾಲಿಗೆ ಕೇಳಿದ್ದನ್ನು ಕೊಡುವ ವರದ ಹಸ್ತನಾಗಿಯೇ ಪ್ರಸಿದ್ಧಿಯನ್ನು ಹೊಂದಿದ್ದು ಅದೇ ಕಾರಣದಿಂದ ಇಡಗುಂಜಿ ಗಣೇಶ, ಜಾತಿ ಧರ್ಮದ ಬೇದವಿಲ್ಲದೆ ಎಲ್ಲಾ ಸಮುದಾಯ ಸಮಾಜದವರ ಆರಾಧ್ಯ ದೇವನಾಗಿದ್ದು ಸಂಕಷ್ಠಿ, ವಿನಾಯಕ ಚೌತಿ, ಮಹಾಚೌತಿ, ಸಂಕ್ರಾoತಿ, ರಥಸಪ್ತಮಿ ಮುಂತಾದ ವಿಶೇಷ ದಿನಗಳಲ್ಲಿ ನಾಡಿನ ನಾನಾ ಭಾಗಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಸಲ್ಲಿಸಿ ಶ್ರೀದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ.

ನಮ್ಮ ವಿಸ್ಮಯ ಟಿವಿ ಯೋಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ವಿಷ್ಣು ಭಟ್ಟ ಮಾತನಾಡಿ ಈ ವರ್ಷವೂ ಸಹ ಇಡಗುಂಜಿಯಲ್ಲಿ ರಥಸಪ್ತಮಿಯ ದಿನದಂದು ಶ್ರೀದೇವ ಮಹಾಸ್ಯಂದನ ರಥೋತ್ಸವ ಭಕ್ತ ಸಾಗರದ ನಡುವೆ ಪೂರ್ವಾನ್ಹ 8.30ಕ್ಕೆ ಸಕಲ ವಿಧಿವಿಧಾನದೊಂದಿಗೆ ನೆರವೇರಿದೆ. ಮಾಘ ಶುಕ್ಲ ಬಿದಿಗೆಯಂದು ನಡೆಯುವ ಈ ಮಹಾ ರಥೋತ್ಸವಕ್ಕೆ ತಾಲೂಕು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲೆಡೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ್ದಾರೆ. ಮಹಾಗಣಪತಿಯು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು….

( Idagunji Jatre) ಪಾರoಪಾರಿಕ ಅರ್ಚಕರಾದ ವೇದಮೂರ್ತಿ ವಿದ್ವಾನ ಮಂಜುನಾಥ ಭಟ್ಟ ಮಾತನಾಡಿ ಇಡಗುಂಜಿಯ ಮಹಾಗಣಪತಿ ರಥಸಪ್ತಮಿಯ ಶುಭ ದಿನದಂದು ರಥವನ್ನೇರಿ,,, ಬಂದoತಹ ಎಲ್ಲ ಭಕ್ತರಿಗೆ ಆಶಿರ್ವಾದ ಮಾಡುವ ಶುಭ ಸಂದರ್ಭ ಈ ದಿನವಾಗಿದೆ. ಈ ದಿನ ಬೆಳಗಿನ ಜಾವ 3.30ಕ್ಕೆ ಜನರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಸೇವೆಗಳನ್ನು ಸಮರ್ಪಿಸಿ, ಶ್ರೀ ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ದೇವಾಲಯದ ಪಾರಂಪಾರಿಕ ಅರ್ಚಕರ ಸಮ್ಮುಖದಲ್ಲಿ ಸಕಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗಿದೆ. ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗೆ ಶ್ರೀ ಮಹಾಗಣಪತಿಯು ಶ್ರೇಯಸ್ಸನ್ನು ಉಂಟುಮಾಡಲಿ ಎಂದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Exit mobile version