Important
Trending

ಭಟ್ಕಳದ ಚಿತ್ರಾಪುರ ಮಠಕ್ಕೆ ಯಶ್, ರಾಧಿಕಾ ಪಂಡಿತ್ ಭೇಟಿ: ಸ್ಟಾರ್ ನಟನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು

ಭಟ್ಕಳ: ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ಕೆಜಿಎಫ್ ಖ್ಯಾತಿಯ ಚಿತ್ರನಟ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ಆಗಮಿಸಿ, ದೇವರ ದರ್ಶನ ಪಡೆದರು. ಇದೇ ವೇಳೆ, ಚಿತ್ರಾಪುರ ಮಠದ ಸ್ವಾಮೀಜಿ ಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸತತ 2 ವರೆಗೆ ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿದರು.

ಚಿತ್ರಾಪುರಕ್ಕೆ ಯಶ್ ರಾಧಿಕಾ ದಂಪತಿಗಳು ಕುಟುಂಬ ಸಮೇತರಾಗಿ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಯಶ್ ನೋಡಲು ಮುಗಿಬಿದ್ದರು. ಸ್ವಾಮೀಜಿ ಗಳೊಂದಿಗೆ ಮಾತುಕತೆ ನಡೆಸಿ ಹೊರಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ಅಭಿಮಾನಿಗಳ ಬಳಿ ಬಂದು ಸ್ವಲ್ಪ ಸಮಯ ಕಳೆದು ಫೋಟೋ ಹಾಗೂ ಆಟೋಗ್ರಾಫ್ ನೀಡಿ ತೆರಳಿದರು. ಇವರೊಂದಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳಾದ ಐರಾ, ಯಥರ್ವ ಹಾಗೂ ರಾಧಿಕಾ ಪಂಡಿತ ತಂದೆ ತಾಯಿ ಕೂಡಾ ಇದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button