Important
Trending

40 ಅಡಿ ಆಳದ ಬಾವಿಗೆ ಕಾಲುಜಾರಿಬಿದ್ದು ಅವಾಂತರ: ಕೊನೆಗೂ ಸುರಕ್ಷಿತವಾಗಿ ಮೇಲೆಬಂದ ವೃದ್ಧ

ಸಿದ್ದಾಪುರ: 40 ಅಡಿ ಆಳದ ಬಾವಿಗೆ ವೃದ್ಧ ನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಸುರಕ್ಷಿತವಾಗಿ ಮೇಳಕ್ಕೆತ್ತಿದ ಘಟನೆ ಸಿದ್ದಾಪುರ ಕೋಲಸಿರ್ಸಿಯಲ್ಲಿ ನಡೆದಿದೆ. ಗಣಪತಿ ಈರ ನಾಯ್ಕ್ (70 ) ಕಾಲು ಜಾರಿ ಬಾವಿಗೆ ಬಿದ್ದ ವ್ಯಕ್ತಿಯಾಗಿದ್ದಾನೆ.

ಸುಮಾರು 40 ಅಡಿ ಆಳದ ಮಣ್ಣಿನ ಬಾವಿ ಯಲ್ಲಿ ಸಿಲುಕಿದ್ದು, ಅಗ್ನಿಶಾಮಕ ದಳ ದ ಸಿಬ್ಬಂದಿ ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು, ಸಾರ್ವಜನಿಕರು ಸೇರಿ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸಿಬ್ಬಂದಿಗಳಾದ ಮಾಸ್ತಿ ಗೊಂಡ, ದಿನೇಶಕುಮಾರ್, ಪ್ರಮೋದ್, ಬಾಳೆಶ್,ಕಿರಣಕುಮಾರ್ ಆನಂದ್, ಅಶೋಕ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button