ಕುಮಟಾ: ( Kumta Toll Plaza) ಹೊಳೆಗದ್ದೆ ಟೋಲ್ ಗೇಟ್ ಸಿಬ್ಬಂದಿಗಳು ಮಂಗಳೂರಿನಿoದ ಕುಮಟಾ ಮಾರ್ಗವಾಗಿ ಕಾರ್ ನಲ್ಲಿ ಸಾಗುತ್ತಿದ್ದ ಪ್ರಯಾಣಿಕರಿಗೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿದ್ದಲ್ಲದೆ, ಮಾರಕಾಸ್ತçಗಳಿಂದ ಕಾರಿನ ಗ್ಲಾಸ್ ಗಳನ್ನು ಒಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಹಲ್ಲೆಗೊಳಗಾದವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರಿನಿoದ ಕುಮಟಾ ( Kumta Toll Plaza) ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಹೊರಟಿದ್ದ 5 ಜನ ಪ್ರಯಾಣಿಕರಿದ್ದ ಸ್ವಿಪ್ಟ್ ಕಾರಿನ ಪಾಸ್ ಟ್ಯಾಗ್ ಕುಮಟಾದ ಹೊಳೆಗದ್ದೆ ಟೋಲ್ ಗೇಟ್‌ನಲ್ಲಿ ರೀಡ್ ಆಗಿಲ್ಲ. ಈ ವೇಳೆ ಟೋಲ್ ಗೇಟ್‌ನ ಸಿಬ್ಬಂದಿ ಅವಾಚ್ಯ ಶಬ್ದದಿಂದ ಬೈದು, ಹಣ ಇಲ್ಲದೆ ಇದ್ದರೆ ಯಾಕೆ ಕಾರಿನಲ್ಲಿ ಪ್ರಾಯಾಣಿಸಬೇಕೆಂದು ಗಟ್ಟಿ ದ್ವನಿಯಲ್ಲಿ ಬೆದರಿಸಿದ್ದು, ಈ ನಿಟ್ಟಿನಲ್ಲಿ ಕಾರಿನಲ್ಲಿದ್ದ ಸಹ ಪ್ರಯಾಣಿಕರು ಟೋಲ್ ಗೇಟ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ನಮ್ಮ ಪಾಸ್ ಟ್ಯಾಗ್‌ನಲ್ಲಿ ಹಣವಿದೆ. ನಿಮ್ಮದೇ ತಾಂತ್ರಿಕ ಸಮಸ್ಯೆಯಿಂದ ಪಾಸ್ ಟ್ಯಾಗ್ ರೀಡ್ ಆಗುತ್ತಿಲ್ಲ ಎಂಬಿತ್ಯಾದಿ ಮಾತುಕತೆಯ ಬಳಿಕ ಪುನಃ ಅವಾಚ್ಯ ಶಬ್ದಗಳಿಂದ ಬೈದ ಟೋಲ್ ಗೇಟ್ ಸಿಬ್ಬಂದಿಗಳು ಕಾರಿನಲ್ಲಿದ್ದ ಪ್ರಾಯಾಣಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಕಾರಿನ ಗ್ಲಾಸ್ ಒಡೆದ ಕಾರಣ ಕಾರ್‌ನ ಒಳಗಿದ್ದ ಮಗುವಿಗು ಸಹ ಗ್ಲಾಸ್ ತುಂಡು ತಗುಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನನ್ವಯ ಕ್ರಮ ಕೈಗೊಂಡ ಪೊಲೀಸರು ಆರೋಪಿತರಾದ ಕುಮಟಾ ಟೋಲ್ ಗೇಟ್ ಸಿಬ್ಬಂದಿ ಸತೀಶ ಪಟಗಾರ, ಕಿರಣ ನಾಯ್ಕ, ಮಂಜುನಾಥ ನಾಯ್ಕ, ನಾಗರಾಜ ನಾಯ್ಕ ಇವರನ್ನು ಬಂಧಿಸಿದ್ದಾರೆ. ಮಂಗಳೂರಿನ ಮಹಮ್ಮದ್ ರಿಲ್ವಾನ್, ಮಹಮ್ಮದ್ ಆಸಿಪ್, ಮಹಮ್ಮದ್ ರಿಫಾನ್, ಮಹಮ್ಮದ್ ಶಾಫಿಲ್, ಮೊಹಿದ್ದಿನ್ ಮುಸ್ತಾಕ್, ಆಯಿಷಾ ರಾಮಲತ್, ಮುಜೀಬ್ ಸೈಯದ್, ನಾಸಿರ್ ಕರೀಂ, ಹಲ್ಲೆಗೊಳಗಾದ ವ್ಯಕ್ತಿಗಳು. ಈ ಸಂಬoಧ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿದ ಮುಜೀಬ್ ಸೈಯದ್ ಘಟನಾವಳಿಯ ಕುರಿತಾಗಿ ಸಂಕ್ಷಿಪ್ತ ವಿವರಣೆ ನೀಡಿದರು.
ಇಷ್ಟೊಂದು ದೊಡ್ಡ ಗಲಾಟೆ ನಡೆದರು ಸಹ ಶೀಘ್ರವೇ ಆಗಮಿಸಬೇಕಿದ್ದ ಪೊಲೀಸರು ಸುಮಾರು 2 ತಾಸಿನ ಬಳಿಕ ಸ್ಥಳಕ್ಕೆ ಆಗಮಿಸಿದ್ದು, ಈ ಬಗ್ಗೆಯೂ ಅಸಮದಾನ ಹೊರಹಾಕಿದ ಹಲ್ಲೆಗೊಳಗಾದ ಮುಜೀಬ್ ಸೈಯದ್ ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ