ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ಅಂಬಾರಕೊಡ್ಲ ವಿಧಿವಶ

ಅಂಕೋಲಾ : ತಾಲೂಕಿನ ಅಂಬಾರಕೊಡ್ಲ (ಪರಿಮಳ ) ನಿವಾಸಿ ವಿಷ್ಣು ನಾಯ್ಕ (79 ) ವಿಧಿವಶರಾಗಿದ್ದಾರೆ. ನಾಡಿನ ನಾಮಾಂಕಿತ ಹಿರಿಯ ಸಾಹಿತಿಯಾಗಿ, ಕವಿಯಾಗಿ ವಿಮರ್ಶಕರಾಗಿ,ಪ್ರಕಾಶಕರಾಗಿ, ರಂಗಭೂಮಿ ಕಲಾವಿದರಾಗಿ, ಶೈಕ್ಷಣಿಕ ಕ್ಷೇತ್ರದ ಗುರುವಾಗಿ, ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿ, ಪತ್ರಿಕೆಯ ಸಂಪಾದಕರಾಗಿ, ಪ್ರಗತಿಪರ ಚಿಂತಕರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬಹುಮುಖಿ ವ್ಯಕ್ತಿತ್ವ ಹೊಂದಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈ ಹಿರಿಯ ಸಾಹಿತಿ ಕನ್ನಡ ಸಾರಸ್ವತ ಲೋಕದಿಂದ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ತನ್ನ ನೇರ ನಡೆ-ನುಡಿ, ಆಕರ್ಷಣೀಯ ವ್ಯಕ್ತಿತ್ವ, ಅರ್ಥ ಗರ್ಭಿತ ಮಾತುಗಾರಿಕೆ,, ಉಡುಗೆ-ತೊಡುಗೆ ಹಾಗೂ ಜೀವನದಲ್ಲಿ ಕೊನೆವರೆಗೂ ಶಿಸ್ತು ಮುಂದುವರಿಸಿಕೊಂಡು ಬಂದಿದ್ದ ಇವರು ಅಂಬಾರಕೋಡ್ಲ ಎನ್ನುವ ಪುಟ್ಟ ಗ್ರಾಮದ ಹೆಸರಿನ ಹಾಗೂ ಸುದೀರ್ಘ ಅವಧಿ ವರೆಗೆ ಗಂಧದ ಕೊರಡಿನಂತೆ ತಮ್ಮ ಬದುಕು ತೇಯ್ದು ನಾಡಿನಾದ್ಯಂತ ಪರಿಮಳ ಸೂಸುವಂತೆ ಮಾಡಿ, ತಮ್ಮ ಮನೆಯಂಗಳ ಬಿಟ್ಟು ರಾಘವೇಂದ್ರನ ಪಾದ ಸೇರಿದ್ದಾರೆ.

ನಾಮಾಂಕಿತ ಹಿರಿಯ ಸಾಹಿತಿ ವಿಷ್ಣು ನಾಯ್ಕ ನಿಧನಕ್ಕೆ ಶಾಸಕ ಸತೀಶ ಸೈಲ್, ಪ್ರಮುಖರಾದ ವಿಶ್ವೇಶ್ವರ ಹೆಗಡೆ ಕಾಗೇರಿ , ಆನಂದ ಅಸ್ನೋಟಿಕರ, ಶುಭಲತಾ ಅಸ್ನೋಟಿಕರ, ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ,ನಾಗೇಶ ದೇವ ಅಂಕೋಲೆ ಕರ, ಶಾಂತಾರಾಮ ನಾಯಕ ಹಿಚ್ಕಡ, ಕಾಳಪ್ಪ ಮಾಸ್ತರ, ಆರ್ ಜಿ ಗುಂದಿ, ಮೋಹನ ಹಬ್ಬು, ಎಸ್ ವಿ ವಸ್ತ್ರದ, ಎಂ.ಎಂ ಕರ್ಕಿಕರ, ಪ್ರಕಾಶ ಕುಂಜಿ, ಗಣಪತಿ ತಾಂಡೇಲ,ಉದಯ ಪ್ರಭು, ಕೃಷ್ಣ ಪ್ರಭು, ವಸಂತ ನಾಯಕ ಜಮಗೋಡ, ಭಾಸ್ಕರ ನಾರ್ವೇಕರ, ಸುಭಾಸ ನಾರ್ವೇಕರ, ಉಮೇಶ ನಾಯ್ಕ, ನಾಗಾನಂದ ಬಂಟ, ವಿನೋದ ಶಾನಭಾಗ, ಶಾಂತಲಾ ನಾಡಕರ್ಣಿ, ಹನುಮಂತ ಗೌಡ, ಪ್ರಕಾಶ ಗೌಡ, ಮೋಹನ ನಾಯ್ಕ ಕುಂಬಾರಕೇರಿ, ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕ, ಕೆನರಾ ವೆಲ್ ಫೇರ್ ಟ್ರಸ್ಟ್, ಕರ್ನಾಟಕ ಸಂಘ, ದಿನಕರ ವೇದಿಕೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ತಾಲೂಕಿನ ಹಾಗೂ ನಾಡಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು,ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಇತರೆ ಸ್ಥರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಷ್ಣು ನಾಯ್ಕ ಅವರ ನಿಧನದಿಂದ ಅವರ ಅಪಾರ ಶಿಷ್ಯ ವೃಂದವೂ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.

ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ವಿಷ್ಣು ನಾಯ್ಕ ಅವರ ದೇಹಾರೋಗ್ಯದಲ್ಲಿ ಗಂಭೀರ ಏರುಪೇರಾಗಿ ಫೆ 17 ರಂದು ಕಾರವಾರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ. ಅಂಕೋಲಾದ ಅವರ ಮನೆಗೆ ಮೃತ ದೇಹ ತರಲಾಗಿದ್ದು, ಕುಟುಂಬಸ್ಥರು ಸಕಲ ವಿಧಿ- ವಿಧಾನ ನೆರವೇರಿಸಿದರು ನೂರಾರು , ಜನರು ಮೃತರ ಅಂತಿಮ ದರ್ಶನ ಪಡೆದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version