Important
Trending

Battery Theft: ಲಾರಿಯಿಂದ ಬ್ಯಾಟರಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಕುಮಟಾ: ಸುಮಾರು 60 ಸಾವಿರ ರೂಪಾಯಿ ಬೆಲೆಬಾಳುವ ನಾಲ್ಕು ಬ್ಯಾಟರಿಯನ್ನು( Battery Theft) ನಿಲ್ಲಿಸಿಟ್ಟ ಲಾರಿಯಿಂದ ಕದ್ದೊಯ್ದ
ಇಬ್ಬರು ಆರೋಪಿಗಳನ್ನು ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕ್ ಸಮೇತ ಕುಮಟಾ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ತಾಲೂಕಿನ ಕತಗಾಲ ಮೂಲದ ಪ್ರಸಾದ ಮುಕ್ರಿ ಮತ್ತು ಮಣಿಕಂಠ ಮುಕ್ರಿ ಬಂಧಿತ ಆರೋಪಿಗಳು.

ಈ ಆರೋಪಿಗಳು ಜುಲೈ 26 ರಂದು ಆರ್‌ಎನ್‌ಎಸ್ ರಸ್ತೆ ನಿರ್ಮಾಣ ಕಂಪನಿಯ ಎರಡು ಡಂಪರ್ ಲಾರಿಯ 60 ಸಾವಿರ ಬೆಲೆಯ ನಾಲ್ಕು ಬ್ಯಾಟರಿಗಳನ್ನು ( Battery Theft) ಕದ್ದು ಪರಾರಿಯಾಗಿದ್ದರು. ಈ ಕುರಿತು ಕಂಪನಿಯ ಸೈಟ್ ಇಂಜಿನಿಯರ್ ಗಿಬ್ಸನ್ ಅವರು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ಕುಮಟಾ Crime ಪಿಎಸ್‌ಐ ನವೀನ ನಾಯ್ಕ ಹಾಗು ಪಿಎಸ್‌ಐ ಪದ್ಮಾ ದೇವಳಿ ಇವರ ನೇತೃತ್ವದ ತಂಡ ಇಬ್ಬರೂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಕಾರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 7ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸಿಬ್ಬಂದಿಗಳಾದ ಗಣೇಶ್ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ಮುಂತಾದವರು ಕಾರ್ಯಾಚರಣೆಗೆ ಸಹಕರಿಸಿದರು.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button