ಅಂಗನವಾಡಿಯಲ್ಲಿ ಬಾವಿ ತೆಗೆಯುವ ವಿಚಾರ: ವಿವಾದಕ್ಕೆ ಬ್ರೇಕ್ ಹಾಕಿದ ಸಚಿವ ಮಂಕಾಳ್ ವೈದ್ಯ

ಬಾವಿಯನ್ನು ಸರಕಾರದಿಂದಲೇ ತೆಗೆಸಿಕೊಡುತ್ತೇವೆಂದು ಸ್ಥಳಕ್ಕೆ ಭೇಟಿ ನೀಡಿ ಗೌರಿಯವರ ಮನ ಒಲಿಕೆ

ಶಿರಸಿ: ಗಣೇಶನಗರದ ಅಂಗನವಾಡಿಯಲ್ಲಿ ಬಾವಿ ತೆಗೆಯುವ ವಿಷಯಕ್ಕೆ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಕೊನೆಗೂ ಬ್ರೆಕ್ ಹಾಕಿದ್ದಾರೆ. ಗೌರಿ ನಾಯ್ಕ ಒರ್ವ ಮಹಿಳೆಯಾಗಿ ಒಬ್ಬಂಟಿಯಾಗಿ ಬಾವಿ ತೆಗೆದಿರುವುದು ಅತ್ಯಂತ ಅಭಿನಂದನಾರ್ಹವಾದ ಸಂಗತಿ. ಅವರ ಪ್ರಯತ್ನ ಭಗೀರಥ ಪ್ರಯತ್ನ.ಅವರು ಇನ್ನೊಬ್ಬರಿಗೆ ಮಾದರಿಯಾಗಬೇಕಾದಂತವರು. ಅವರಿಗೆ ವಯಸ್ಸಾಗಿರುವುದರಿಂದ ಈಗ ಅಂಗನವಾಡಿಯಲ್ಲಿ ತೆಗೆಯುತ್ತಿರುವ ಬಾವಿ ಕೆಲಸವನ್ನು ನಿಲ್ಲಿಸಬೇಕು.ಬಾವಿಯನ್ನು ಸರಕಾರದಿಂದಲೇ ತೆಗೆಸಿಕೊಡುತ್ತೇವೆಂದು ಸ್ಥಳಕ್ಕೆ ಭೇಟಿ ನೀಡಿ ಗೌರಿಯವರ ಮನ ಒಲಿಸಿದ್ದಾರೆ. ಹೀಗಾಗಿ ಬಾವಿ ತೋಡುವ ವಿವಾದಕ್ಕೆ ಇದೀಗ ತೆರೆ ಬಿದ್ದಂತಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version