ಅಂಗಡಿಗಳ ಸರಣಿ ಕಳ್ಳತನಕ್ಕೆ ವಿಫಲ ಯತ್ನ; ಮೇಲ್ಮಹಡಿ ಹಂಚು ಸರಿಸಿ ಒಳನುಗ್ಗಿದ ಕಳ್ಳ

ಅಂಕೋಲಾ: ಪಟ್ಟಣದ ಬಂಡಿ ಬಜಾರ್ ವ್ಯಾಪ್ತಿಯಲ್ಲಿ ಅಂಗಡಿಗಳ ಸರಣಿ ಕಳ್ಳತನಕ್ಕೆ ಯಾರೋ ಯತ್ನಿಸಿದಂತಿದ್ದು, 2 ಅಂಗಡಿಗಳ ಮೇಲ್ಮಹಡಿ ಹಂಚು ಸರಿಸಿ ಒಳ ನುಗ್ಗಿ ಕಳ್ಳತನ ಕೃತ್ಯ ನಡೆಸಲು ಮುಂದಾಗಿದ್ದಾರೆ. ಈ ಹಿಂದೆಯೂ ಈ ಭಾಗದಲ್ಲಿ 2-3 ಬಾರಿ ಸಣ್ಣ ಪುಟ್ಟ ಕಳ್ಳತನವಾಗಿರುವ ಕುರಿತು ನೆನಪಿಸಿಕೊಂಡ ಸ್ಥಳೀಯರು, ಮತ್ತೆ ಕಳ್ಳರ ಕರಾಮತ್ತು ಮುಂದುವರಿದಿರುವುದಕ್ಕೆ ಆತಂಕವ್ಯಕ್ತಪಡಿಸಿದoತಿದೆ. ಎರಡು ಅಂಗಡಿಗಳ ಪಕ್ಕ ಇರುವ ಖಾಸಗಿ ವ್ಯಕ್ತಿಯೋರ್ವರ ಆಫೀಸನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಜಾಡು ಪತ್ತೆಯಾಗಿದ್ದು ಟಾರ್ಚ ಲೈಟ್ ಹಿಡಿದು ಎಲ್ಲಡೆ ತಡಕಾಡಿ ವಾಪಸ್ಸ ಆಗಿದ್ದಾನೆ ಎನ್ನಲಾಗುತ್ತಿದೆ.

ಮೇಲೃಹಡಿ ಹಂಚು ಸರಿಸಿ ಕೆಳಗಿಳಿದ ಈ ಕಳ್ಳ ನಾರು? ಕಳ್ಳತನಕ್ಕೆ ಈತನೊಬ್ಬನೇ ಬಂದಿದ್ದನೇ ? ಬೇರೆ ಯಾರಾದರೂ ಕೈ ಜೋಡಿಸಿದ್ದರೇ ? ಕಳ್ಳತನ ಕೃತ್ಯ ಫಲಿಸದೇ ಬರಿಗೈಯಲ್ಲಿಯೇ ವಾಪಸ್ ಆದರೆ ಎಂಬಿತ್ಯಾದಿ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು,ಈ ಕುರಿತು ಪೊಲೀಸರಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version