Focus News
Trending

ಅಂಕೋಲಾ ಅರ್ಬನ್ ಕೋ ಅಪ್ ಬ್ಯಾಂಕ್: 7ನೇ ಶಾಖೆ ಕುಮಟಾದಲ್ಲಿ ಶಾಖೆ ಆರಂಭ

ಅಂಕೋಲಾ ಅರ್ಬನ್ ಕೋ ಅಪ್ ಬ್ಯಾಂಕ್ ಲಿ ಅಂಕೋಲಾದ 7 ನೇ ಶಾಖೆಯಾಗಿ ಕುಮಟಾದಲ್ಲಿ ಇಂದು ನೂತನ ಶಾಖೆ ಆರಂಭಿಸಲಾಯಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಪರ್ತಗಾಳಿ ಗೋವಾದ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನೂತನ ಶಾಖೆ ಉದ್ಘಾಟಿಸಿ, ಆಶೀರ್ವಚನ ಮಾಡಿದರು 110 ವರ್ಷಗಳ ಸುದೀರ್ಘ ಇತಿಹಾಸದೊಂದಿಗೆ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಹಿರಿತನ ಹೊಂದಿರುವ ದಿ ಅಂಕೋಲಾ ಅರ್ಬನ್ ಕೋ – ಆಪ್ ಬ್ಯಾಂಕ್ ಲಿಮಿಟೆಡ್ ಅಂಕೋಲಾ, ಈಗಾಗಲೇ ಅಂಕೋಲಾ, ಅವರ್ಸಾ,ಬೇಲೆಕೇರಿ, ಕಾರವಾರ, ಯಲ್ಲಾಪುರ, ಶಿರಸಿ ಯಲ್ಲಿ ಶಾಖೆ ಹೊಂದಿದ್ದು ಉತ್ತಮ ಸೇವೆ ನೀಡುತ್ತ :2022-23 ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಬ್ಯಾಂಕು 62.10 ಲಕ್ಷ ನಿವ್ವಳ ಲಾಭ ದೊಂದಿಗೆ ಶೇರುದಾರರಿಗೆ 8 ಪ್ರತಿಶತ ಲಾಭಾಂಶ ನೀಡಿ ಮುನ್ನಡೆಯುತ್ತಿದೆ.

ಬದಲಾಗುತ್ತಿರುವ ಕಾಲ ಮಾನ ಪದ್ಧತಿಗೆ ಅನುಗುಣವಾಗಿ ಖಾಸಗಿ ಬ್ಯಾಂಕುಗಳ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಪೈಪೋಟಿಯ ನಡುವೆಯೂ ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು ಯುಪಿಐ ಪೇಮೆಂಟ್ ಸೇರಿದಂತೆ ಆಧುನಿಕ ಮತ್ತು ಡಿಜಿಟಲಿಕರಣಕ್ಕೆ ಬ್ಯಾಂಕ್ ತೆರೆದುಕೊಳ್ಳುತ್ತಿದೆ. ಫೆ 22 ರಂದು ಬ್ಯಾಂಕಿನ 7 ನೇ ಶಾಖೆಯಾಗಿ ಕುಮಟಾದಲ್ಲಿಯೂ ನೂತನ ಶಾಖೆ ಆರಂಭಿಸಲಾಗಿದೆ. ಗುರುವಾರ ಸಾಯಂಕಾಲ 4:00ಗೆ ಕುಮಟಾದ ಕುಂಬೇಶ್ವರ ರಸ್ತೆಯ ಪಂಡಿತ್ ಆಸ್ಪತ್ರೆ ಹತ್ತಿರ ವಿಶ್ವ ಪ್ರೇಮ ಬಿಲ್ಡಿಂಗ್ ನಲ್ಲಿ ನೂತನ ಶಾಖೆಯನ್ನು ಮತ್ತು ಭದ್ರತಾ ಕೋಶವನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉದ್ಘಾಟಿಸಿದರು,

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಅತಿಥಿ ಗಣ್ಯರೊಂದಿಗೆ ದೀಪ ಬೆಳಗಿ ಉದ್ಘಾಟಿಸಿದ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ವೇದಮೂರ್ತಿ ರಮೇಶ ಭಟ್ಟ ವೇದಘೋಷ ಮಾಡಿದರು ,ಬ್ಯಾಂಕಿನ ನಿರ್ದೇಶಕ ನಾಗಾನಂದ ಐ ಬಂಟ ಪ್ರಾರ್ಥಿಸಿದರು. ನಿರ್ದೇಶಕ ರಾಜೇಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಮುರಳೀಧರ ಪ್ರಭು, ಡಾ ಜಿ. ಜಿ. ಹೆಗಡೆ, ರಾಜೇಂದ್ರ ಎಲ್ ಭಟ್ಟ, ಆರ್ ಜಿ ನಾಯ್ಕ ಉಪಸ್ಥಿತರಿದ್ದು ಶುಭ ಕೋರಿದರು.

ಬ್ಯಾಂಕಿನ ಅಧ್ಯಕ್ಷ ಭಾಸ್ಕರ ನಾರ್ವೇಕರ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್ ಗೆ ಬಾಡಿಗೆ ನೀಡಿದ ಕಟ್ಟಡದ ಮಾಲಕ ಗಣಪತಿ ವೆರ್ಣೇಕರ ಅವರಿಗೆ ಗೌರವಿಸಲಾಯಿತು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರವೀಂದ್ರ ವೈದ್ಯ ವಂದಿಸಿದರು. ಅತಿಥಿ ಗಣ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸ್ವಾಮೀಜಿಗಳಿಂದ ಭಕ್ತರು ಮತ್ತಿತರ ಪ್ರಮುಖರು ಫಲ ಮಂತ್ರಾಕ್ಷತೆ ಸ್ಪೀಕರಿಸಿ ಗುರುನಮನ ಸಲ್ಲಿಸಿದರು.ಕುಮಟಾ ಶಾಖೆಯ ವ್ಯವಸ್ಥಾಪಕ ಆರ್ ಬಿ ನಾಯ್ಕ ಮತ್ತು ಜೋಗೀಶ ನಾಯಕ ಮತ್ತು ಸಿಬ್ಬಂದಿಗಳು ಹಾಗೂ ಬ್ಯಾಂಕಿನ ಉಪಾಧ್ಯಕ್ಷ ರು, ನಿರ್ದೇಶಕ ಮಂಡಳಿಯ ಸದಸ್ಯರು ,ವೃತ್ತಿಪರ ನಿರ್ದೇಶಕರು, ಇತರರು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಗೋವಿಂದರಾಯ ಕೆ ನಾಯ್ಕ ಬೆಳಂಬಾರ, ನಿರ್ದೇಶಕರುಗಳಾದ ಬಿ.ಡಿ.ನಾಯ್ಕ, ಗೋಪಾಲಕೃಷ್ಣ ನಾಯಕ, ಚಂದ್ರಕಾಂತ ನಾಯ್ಕ, ಉಮೇಶ ನಾಯ್ಕ,, ಪ್ರಕಾಶ ಕುಂಜಿ, ಪ್ರಭಾ ಹಬ್ಬು, ಅನುರಾಧಾ ನಾಯ್ಕ, ಗೌರಿ ಸಿದ್ಧಿ, ವೃತ್ತಿಪರ ನಿರ್ದೇಶಕರಾಗಿರುವ
ಗುರುನಾಥ ರಾಯ್ಕರ್, ಯೋಗಿತಾ ಕಾಮತ ಉಪಸ್ಥಿತರಿದ್ದರು. ಬ್ಯಾಂಕಿನ ಸಿಬ್ಬಂದಿಗಳು, ಶೇರುದಾರರು,ಕುಮಟಾ ಸುತ್ತಮುತ್ತಲ ಸಾರ್ವಜನಿಕರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.ನೂರಾರು ವರ್ಷಗಳ ಇತಿಹಾಸದೊಂದಿಗೆ ಹಲವು ಏಳು ಬೀಳುಗಳನ್ನು ಕಂಡ ಈ ಬ್ಯಾಂಕ್ , ಈಗ ಲಾಭದತ್ತ ಮುಖ ಮಾಡಿದ್ದು ಕುಮಟಾದ ಹೊಸ ಶಾಖೆಯೊಂದಿಂಗೆ ಮತ್ತಷ್ಟು ಏಳಿಗೆ ಕಾಣುತ್ತ ಸಾಗಲಿ ಮತ್ತು ಎಲ್ಲಾ ಶಾಖೆಗಳಲ್ಲಿ ಸ್ಥಳೀಯರ ಸಹಕಾರ ಮತ್ತಷ್ಟು ಸಿಗಲಿ ಎನ್ನುವುದು ಬ್ಯಾಂಕಿನ ಹಿತೈಷಿಗಳ ಆಶಯವಾಗಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button