FACT CHECK: ಕುಮಟಾ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ವದಂತಿ: ಗಾಳಿ ಸುದ್ದಿಯೆಂದ ಅಧಿಕಾರಿಗಳು

ಕುಮಟಾ: ಉತ್ತರಕನ್ನಡ ಜಿಲ್ಲೆಯ ಕುಮಟಾ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಕಾಣಿಸಿಕೊಂಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಇದೊಂದು ಗಾಳಿ ಸುದ್ಧಿ ಎಂದು ಕರಾವಳಿ ಕಾವಲುಪಡೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಕರಾವಳಿಯ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಮೂಲದ ಬೋಟ್ ಪತ್ತೆಯಾಗಿ, ಮಂಗಳೂರಿನ ಮೀನುಗಾರರು ಆ ಬೋಟ್‌ನ ಪೋಟೋ, ವಿಡಿಯೋ ಸೆರೆಹಿಡಿದಿದ್ದು ಜಾಲತಾಣಗಳಲ್ಲಿ ಹಂಚಿಕೊoಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಆದರೆ ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗಿದೆ. ಈ ಬಗ್ಗೆ ಕರಾವಳಿ ಕಾವಲು ಪಡೆ, ನೌಕಾದಳವು ಗಮನ ಹರಿಸಿದ್ದು, ಸುಳ್ಳು ಸುದ್ದಿಗೆ ಸಂಬoದಿಸಿದoತೆ ಎಲ್ಲಾ ರೀತಿಯ ಮಾಹಿತಿಯನ್ನು ಕಲೆಹಾಕಿದೆ. ಅದೇ ರೀತಿ ಇಂತಹ ಸುದ್ದಿ ಹರಿದಾಡಿದ ಬೆನ್ನಲ್ಲೆ ಎಲ್ಲಾ ರೀತಿಯ ತಪಾಸಣೆ ನಡೆಸಲಾಗಿದೆ. ಆದರೆ ಯಾವುದೇ ರೀತಿಯ ಬೋಟ್ ಕಂಡುಬoದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ , ಕುಮಟಾ

Exit mobile version