ನೋವಿನ ವೇದನೆ ತಾಳಲಾರದೆ ಸಾವಿಗೆ ಶರಣಾದ ವ್ಯಕ್ತಿ

ಕುಮಟಾ: ಕಳೆದ 5,6 ತಿಂಗಳಿನಿoದ ಬಾಯಿ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ನೋವಿನ ವೇದನೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಾಡದ ಜೇಷ್ಠಪುರದಲ್ಲಿ ನಡೆದಿದೆ. ರಾಮಾ ಪರಮಯ್ಯ ಪಟಗಾರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದುಬಂದಿದೆ. ಇವರು ಕಳೆದ ಐದಾರು ತಿಂಗಳಿನಿoದ ಬಾಯಿಯ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿದ್ದರು.

ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಔಷಧೋಪಚಾರ ಮಾಡಿದರೂ ಗುಣಮುಖವಾಗಿರಲಿಲ್ಲ. ವಿಪರೀತ ನೋವಿನಿಂದ ಬಳಲುತ್ತಿದ್ದರು. ಇದರಿಂದ ಮನನೊಂದು ಮನೆಯ ಹಿಂಬದಿಯ ಮಾಡಿನ ಮೇಲ್ಚಾವಣಿಯ ಪಕಾಶಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ರಾಮಾ ಪಟಗಾರ ಅವರ ಪುತ್ರ ಉಲ್ಲಾಸ ಪಟಗಾರ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version