ತೋಟದ ಬಾವಿಯಲ್ಲಿ ಬಿದ್ದು ಮೃತಪಟ್ಟ ಚಿರತೆ

ಶಿರಸಿ: ತಾಲೂಕಿನ ಹುಲೇಕಲ್ ಅರಣ್ಯ ವಲಯದ ಸಾಲ್ಕಣಿ ಗ್ರಾಮದ ತೋಟದ ಬಾವಿಯಲ್ಲಿ ಚಿರತೆಯೊಂದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಸಾಲ್ಕಣಿ ಗ್ರಾಮದ ರಾಮಚಂದ್ರ ಗಣಪತಿ ಎನ್ನುವವರ ಮಾಲ್ಕಿ ಜಮೀನಿನಲ್ಲಿರುವ ತೋಟದ ಬಾವಿಯಲ್ಲಿ ಸುಮಾರು 3 ವರ್ಷ ಪ್ರಾಯದ ಚಿರತೆ ಬಿದ್ದು ಮೃತಪಟ್ಟಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಮಾರ್ಗದರ್ಶನದಲ್ಲಿ ಬಾವಿಯಿಂದ ಚಿರತೆಯನ್ನು ಹೊರತೆಗೆಯಲಾಯಿತು. ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜಿ ಪ್ರಕಾಶ ಸಮ್ಮುಖದಲ್ಲಿ ಬೈ ರುಂಬೆ ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version