ಬಸ್ಸಿನಡಿ ಸಿಲುಕಿ ತಾಯಿ ಮಗಳ ದುರ್ಮರಣ

ಹೊನ್ನಾವರ: ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮಂಕಿ ಸಾರಸ್ವತಕೇರಿ ಕ್ರಾಸ್ ಸಮೀಪ ಸಂಭವಿಸಿದೆ. ಮುರುಡೇಶ್ವರ ಮೂಲದ ತಾಯಿ ಮತ್ತು ಮಗಳು ಎಲೆಕ್ಟ್ರಿಕ್ ಸ್ಕೂಟಿಯಲ್ಲಿ ಬರುತ್ತಿರುವಾಗ ಹಿಂದು ಗಡೆಯಿಂದ ಅತಿ ವೇಗವಾಗಿ ಬಂದ ಬಸ್, ಡಿಕ್ಕಿ ಹೊಡೆದಿದೆ.

ಪರಿಣಾಮ ರಸ್ತೆಯಲ್ಲಿ ಬಿದ್ದ ತಾಯಿ, ಮಗಳು ಸ್ಥಳದಲ್ಲೆ ಸಾವನ್ನಪ್ಪಿದಾರೆ ಎಂದು ತಿಳಿದು ಬಂದಿದೆ. ಮೃತರು ಮುರುಡೇಶ್ವರ ಮೂಲದ ಸವಿತಾ ಆಚಾರಿ ಮತ್ತು ಅಂಕಿತಾ ಆಚಾರಿ. ಸ್ಥಳಕ್ಕೆ ಆಗಮಿಸಿದ ಮಂಕಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿದ ಮಂಕಿ ಗ್ರಾಮಸ್ಥರು ಐಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಇಂತಹ ಘಟನೆ ಪದೆ ಪದೆ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version