Important
Trending

ವಾರದ ಹಿಂದಷ್ಟೇ ಮದುವೆಯಾದ ವರ ಇಂದು ಸಾವು

ಭಟ್ಕಳ: ತಾಲೂಕಿನಲ್ಲಿ ವಾರದ ಹಿಂದೆಯಷ್ಟೇ ಮದುವೆಯಾದ ವರನೋರ್ವ ಎಂದು ಸಾವನ್ನಪ್ಪಿದ್ದಾನೆ
ಮೃತ ವ್ಯಕ್ತಿ 23 ವರ್ಷದ ಯುವಕ ಅಜಾಜ್ ನಗರ 1st ಕ್ರಾಸ್ ನಿವಾಸಿ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ಜೂನ್ 25 ರಂದು ಮದುವೆ ಆಗಿದ್ದು . ನಿನ್ನೆ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಿದ್ದು, ಇಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ. ಮೇಲ್ನೋಟಕ್ಕೆ ಈತ ಬ್ರೇನ್ ಟ್ಯೂಮರನಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾಗಿದೆ. ಮೃತ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದ್ದು, ಗಂಟಲು ದ್ರವ ಪರೀಕ್ಷೆ ವರದಿ ಬಂದ ಮೇಲೆ ಸಾವಿನ ಬಗ್ಗೆ ಸತ್ಯಾ ಸತ್ಯತೆ ತಿಳಿದು ಬರಬೇಕಿದೆ

ತಾಲೂಕಿನಲ್ಲಿ ಹಬ್ಬಿದೆ ಗಾಳಿ ಸುದ್ದಿ: ಇಂದು ಮಂಗಳೂರಿನಲ್ಲಿ ಸಾವಪ್ಪಿರುವ ವ್ಯಕ್ತಿ ಕೋವಿಡ್ ನಿಂದ ಸಾವನ್ನಪ್ಪಿದ್ದಾನೆಂದು ತಾಲೂಕಿನಾದ್ಯಂತ ಗಾಳಿ ಸುದ್ದಿ ಹಬ್ಬಿದ್ದು ತಾಲೂಕಿನ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆದರೆ , ಜನರು ಇಂಥ ಆಧಾರವಿಲ್ಲದ ಗಾಳಿಸುದ್ದಿಗೆ ಜನರು ತಲೆಕೆಡಿಸಿಕೊಳ್ಳಬಾರದು ಎಂಬ ಮಾತುಗಳು ಕೇಳಿಬಂದಿವೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Related Articles

Back to top button