Big News
Trending

ನಮ್ಮ ಜಿಲ್ಲೆಯಲ್ಲಿ ಅನೇಕರು ಟಿಕೇಟ್ ಕಿಸಿಯಲ್ಲಿ ಇಟ್ಟು ಓಡಾಡುತ್ತಿದ್ದಾರೆ: ಸಂಸದ ಅನಂತ್‌ಕುಮಾರ್ ಹೆಗಡೆ ಹೇಳಿಕೆ

ಹೊನ್ನಾವರ: ಭಾರತಿಯ ಜನತಾ ಪಾರ್ಟಿ ಹೊನ್ನಾವರ ಮಂಡಲದ ವತಿಯಿಂದ ಹೊನ್ನಾವರ ತಾಲೂಕಿನ ಉಪ್ಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಬಿಜೆಪಿ ಮುಗ್ವಾ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಯಿತು. ಸಂಸದ ಅನಂತಕುಮಾರ ಹೆಗಡೆಯವರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದರಾದ ಅನಂತಕುಮಾರ ಹೆಗಡೆ ದೀಪ ಬೇಳಗಿಸುವುದರ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ ಸಂವಿಧಾನವನ್ನು ಕಾಂಗ್ರೇಸ್ ಪಕ್ಷ ತಿರುಚಿ ಕುಲಗೆಡಿಸಿ ಅತ್ಯಾಚಾರ ಮಾಡಿದ್ದಾರೆ. ರಾಜೀವ ಗಾಂಧಿ ಆಡಳಿತ ಅವಧಿಯಲ್ಲೆ ತಿರುಚುವ ಕಾರ್ಯ ಆರಂಭವಾಗಿದೆ. ಅಂಬೇಡ್ಕರ್ ಕಲ್ಪನೆಯಂತೆಯೇ ಸಂವಿಧಾನ ಇರಬೇಕಾದರೆ ಬಿಜೆಪಿಗೆ ಲೋಕಸಭೆಯಲ್ಲಿ 400 ಸಂಖ್ಯಾಬಲದ ಅಗತ್ಯವಿದೆ. ಜ್ಯಾತ್ಯತೀತತೆಯನ್ನು ತುರ್ತುಪರಿಸ್ಥಿತಿಯ ನಂತರ ತುರುಕುವ ಕಾರ್ಯವಾಗಿದೆ. ಹಿಂದು ಸಮಾಜದ ಆತ್ಮವಿಶ್ವಾಸ ಕುಗ್ಗಿಸಿ, ದೇವರು ಧರ್ಮದ ಕುರಿತು ಅಪನಂಬಿಕೆ ತರುವ ಕಾರ್ಯಕ್ಕೆ ಕಾಂಗ್ರೇಸ್ ಮುಂದಾಗಿದೆ ಎಂದು ಆರೋಪಿಸಿದರು.

ದೇಶ ಹಾಗೂ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಾರೆ ಎಂದು ಬಿಜೆಪಿಯವರ ಮೇಲೆ ಆರೋಪಿಸುತ್ತಾರೆ. ಯಾರದೊ ಅಪ್ಪನ ಅಮ್ಮನ ಹೆಸರಿನಲ್ಲಿ ರಾಜಕಾರಣ ಮಾಡುವುದಲ್ಲ. ನಾವು ನಮ್ಮ ಧರ್ಮ ಹಾಗೂ ದೇಶಾಭಿಮಾನದ ಮೂಲಕವೇ ರಾಜಕಾರಣ ಮಾಡುತ್ತೆವೆ ಅದುವೆ ನಮ್ಮ ಜೀವಾಳ ಎಂದು ಟಾಂಗ್ ನೀಡಿದರು. ಕಾಂಗ್ರೇಸ್ ಪಕ್ಷ ಹಿಂದು ಸಮಾಜದ ಅಡಿಪಾಯಕ್ಕೆ ಬಾಂಬ್ ಇಟ್ಟಿದ್ದಾರೆ. ಬ್ರೀಟಿಷ್ ಅವಧಿಯಲ್ಲಿ ದೇವಸ್ಥಾನದ ಆದಾಯ ಅದಕ್ಕೆ ಬಳಕೆಯಾಗುತ್ತಿತ್ತು. ಕಾಂಗ್ರೇಸ್ ಸರ್ಕಾರ ತಂದ ಕಾನೂನಿನಿಂದ ದೇವಾಲಯದ ಆದಾಯ ಸರ್ಕಾರದ ಬಳಸಿಕೊಳ್ಳುತ್ತಿದೆ. ದೇವಸ್ಥಾನದಲ್ಲಿ ಹಾಕುವ ಕಾಣಿಕೆ ದೇವರಿಗೆ ಹಾಕುವ ಕಾಣಿಕೆಯಲ್ಲ. ಸರ್ಕಾರಕ್ಕೆ ಕೊಡುವ ದೇಣಿಗೆಯಾಗಿದೆ, ಕೇಂದ್ರದ ಜೊತೆ ಹೆಚ್ಚಿನ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗ ಮಾರಿಜಾತ್ರೆ ಆರಂಭವಾಗಲಿದ್ದು, ಅಂದಿನಿAದ ಹಿಂದುಗಳ ತಾಂಡವನರ್ತನ ಶುರುವಾಗಲಿದೆ ಎಂದರು.

ಮಲೆಮಹದೇಶ್ವರ ದೇಗುಲ ವಶಕ್ಕೆ ಪಡೆದಂತೆ ಸರ್ಕಾರ ಮುಂದಿನ ದಿನದಲ್ಲಿ ಮೈಸುರಿನ ಚಾಮುಂಡೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ, ಶಿರಸಿಯ ಮಾರಿಕಾಂಬ, ಇಡಗುಂಜಿ, ಮುರ್ಡೆಶ್ವರದಂತಹ ಆದಾಯ ಬರುವ ದೇವಾಲಯ ವಶಪಡಿಸಿಕೊಳ್ಳುವ ಹುನ್ನಾರವು ಇದೆ. ಇಂತಹ ಹಿಂದು ವಿರೋಧಿ ನೀತಿ ತಡೆಯಲು ಬಿಜೆಪಿಯ ಅಗತ್ಯವಿದೆ. ಈ ಹಿಂದೆ ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದರು. ನಾವು ಹೇಳುತ್ತೇವೆ ಹಿಂದುಗಳ ತೆರಿಗೆ ಹಿಂದುಗಳ ಹಕ್ಕು ಎಂದು. ಮುಸ್ಲಿಂ ಸಮುದಾಯದಲ್ಲಿ ತೆರಿಗೆ ಕಟ್ಟಬಾರದು ಎನ್ನುವ ನಿಯಮವಿದೆ. ತೆರಿಗೆ ಕಟ್ಟುವುದು ಹರಾಮ್ ಎನ್ನುತ್ತಾರೆ ಎಂದು ರಾಜ್ಯ ಸರ್ಕಾರದ ಮುಸ್ಲಿಂ ಓಲೈಕೆಯ ಧೋರಣಿಯನ್ನು ಟೀಕಿಸಿದರು.

ನಮ್ಮ ಜಿಲ್ಲೆಯಲ್ಲಿ ಅನೇಕರು ಟಿಕೇಟ್ ಕಿಸಿಯಲ್ಲಿ ಇಟ್ಟು ಓಡಾಡುತ್ತಿದ್ದಾರೆ. ಟಿಕೇಟ್ ಕೇಳಿ ಅಭ್ಯಾಸವಿಲ್ಲ. ಯಾರೇ ನಿಂತರೂ ಬಿಜೆಪಿ ಗೆಲ್ಲಬೇಕು. ಯಾವ ರೀತಿ ಗೆಲ್ಲಬೇಕು ಎಂದರೆ ಹಳೆ ದಾಖಲೆಯನ್ನು ಅಳಿಸಿ, ಮತ್ತೊಂದು ಹೊಸ ದಾಖಲೆ ಬರೆಯುವಂತಿರಬೇಕು ಎಂದರು. ನಂತರ ಶಾಸಕ ದಿನಕರ ಶೆಟ್ಟಿ ಮಾತನಾಡಿ ಅನಂತಕುಮಾರ ಹೆಗಡೆ ಹೊರತಾಗಿ ಸಿದ್ದರಾಮಯ್ಯ ಎದುರಾಗಿ ಮಾತನಾಡುವ ತಾಕ್ಕತ್ತು ಬಿಜೆಪಿಯ ಯಾವೊಬ್ಬ ನಾಯಕರಿಗೂ ಇಲ್ಲ. ಇದು ನಮ್ಮ ಪಕ್ಷದ ನಾಯಕರಿಗೂ ಅರಿವಾಗಿದೆ. ಈ ಬಾರಿ ಲೋಕಸಭೆ ಟಿಕೇಟ್ ನೀಡಬೇಕು. ಆ ಮೂಲಕ ಮತ್ತೊಮ್ಮೆ ಅನಂತಕುಮಾರ ಹೆಗಡೆ ಸಂಸದರಾಗಬೇಕು ಎಂದರು.

ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ, ಬಿಜೆಪಿ ಪ್ರಮುಖರಾದ ರಾಜೇಶ ಭಂಡಾರಿ, ಶಿವಾನಂದ ಹೆಗಡೆ ಕಡತೋಕಾ, ಜಿ.ಜಿ.ಶಂಕರ್, ದೀಪಕ ನಾಯ್ಕ, ಮುಗ್ವಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಹೆಗಡೆ, ಕಡ್ಲೆ ಗ್ರಾಮಪಂಚಾಯತ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಎಂ.ಜಿ.ಭಟ್, ಗಣಪತಿ ಗೌಡ ಚಿತ್ತಾರ, ಶ್ರೀಕಲಾ ಶಾಸ್ತ್ರಿ, ಯೋಗೀಶ ಮೇಸ್ತ , ದೇವಾಲಯದ ಅಧ್ಯಕ್ಷರಾದ ಕೃಷ್ಣಾನಂದ ಭಟ್ ಉಪ್ಲೆ, ಮತ್ತಿತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button