Important
Trending

ಉತ್ತರಕನ್ನಡದಲ್ಲಿ ಬೆಂಗಳೂರು ಸ್ಫೋಟದ ಬಾಂಬರ್ ಓಡಾಟ: ಆರೋಪಿಯ ಟೋಪಿ ವಶಕ್ಕೆ

ಕಾರವಾರ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಶಂಕಿತ ಉಗ್ರ ಉತ್ತರಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡಿದ್ದಾನೆ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಶಂಕಿತ ಉಗ್ರ ಬೆಂಗಳೂರಿನಿAದ ಬಸ್ ಹತ್ತಿದ್ದು, ತುಮಕೂರಿನಲ್ಲಿ ಇಳಿದಿದ್ದಾನೆ. ಹೀಗೆ ಬಸ್ ಅನ್ನು ಬದಲಾಯಿಸುತ್ತಲೇ ಮಂತ್ರಾಲಯ-ಗೋಕರ್ಣ ಬಸ್ ಮೂಲಕ ಭಟ್ಕಳದ ಕಡೆ ತೆರಳಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಪೊಲೀಸರು ಭಟ್ಕಳದಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ. ಜಿಲ್ಲೆಯ ಭಟ್ಕಳದ ಮೂಲಕ ಸಂಚಾರ ಮಾಡಿ, ರಾಜ್ಯದ ಗಡಿದಾಟುವ ಪ್ರಯತ್ನ ಮಾಡಿದ್ದಾನೆಯೋ ಅಥವಾ ಭಟ್ಕಳದಲ್ಲಿ ಏನಾದರು ಸಂಪರ್ಕ ಇದೆಯೋ? ಈ ಕುರಿತು ತನಿಖೆ ಭರದಿಂದ ಸಾಗಿದೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಇದೇ ವೇಳೆ, ಶಂಕಿತ ಉಗ್ರ ಟೋಪಿ ಹಾಗೂ ಬಟ್ಟೆ ಬದಲಿಸಿಕೊಂಡು ಬಸ್‌ನಲ್ಲಿ ಪ್ರಯಾಣಿದ್ದಾನೆ. ಈಗಾಲೇ ತನಿಖಾ ತಂಡ ಆರೋಪಿ ಬಿಟ್ಟುಹೋಗಿರುವ ಟೋಪಿಯನ್ನ ವಶಕ್ಕೆ ಪಡೆದುಕೊಂಡಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button