Important
Trending

ಮಾರಿಕಾಂಬಾದೇವಿಯ ಜಾತ್ರೆಯಲ್ಲಿ ಕಿಸೆಗಳ್ಳತನಕ್ಕೆ ಯತ್ನ: ಇಬ್ಬರ ಬಂಧನ

ಶಿರಸಿ : ಮಾರಿಕಾಂಬಾದೇವಿಯ ಜಾತ್ರೆಯಲ್ಲಿ ಜನಸಂದಣಿಯ ನಡುವೆ ಕಿಸೆಗಳ್ಳತನಕ್ಕೆ ಯತ್ನಿಸಿದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಪತ್ತೆಮಾಡಿ ಬಂಧಿಸುವಲ್ಲಿ ನಗರ ಠಾಣಾ ಪೋಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟç ಪುಣೆ ಜಿಲ್ಲೆಯ ಸಂಜಯ ನಗರದ ತುಷಾರ ಹರಿದಾಸ ಗಾಯಕವಾಡ ಹಾಗೂ ಮಹಾರಾಷ್ಟç ಮೂಲದ ರಾಹುಲ ಪ್ರಹ್ಲಾದ ಮಾವಲೆ ಎನ್ನುವವರು ಬಂಧಿತ ಆರೋಪಿಗಳು.

Sirsi Jatre Live: ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾಮಹೋತ್ಸವದ ನೇರಪ್ರಸಾರ

ಮಾರಿಕಾಂಬಾ ದೇವಿಯ ರಥವು ದೇವಸ್ಥಾನದಿಂದ ಬಿಡ್ಕಿಬೈಲ್ ಗದ್ದುಗೆಗೆ ತೆರಳುವ ಸಂದರ್ಭದಲ್ಲಿ ಈ ಇಬ್ಬರು ಸೇರಿ ಜೇಬು ಕಳ್ಳತನ ಹಾಗೂ ಸರಕಳ್ಳತನಕ್ಕೆ ಹೊಂಚು ಹಾಕುತ್ತಿರುವ ವೇಳೆ ನಗರ ಠಾಣೆ ಸಿಬ್ಬಂದಿಗಳಾದ ನಾಗಪ್ಪ ಲಮಾಣಿ ಹಾಗೂ ಪ್ರಶಾಂತ ಪಾವಸ್ಕರ್ ಕಳ್ಳರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button