Big News
Trending

TYSA ನ್ಯೂರೊಲೋಜಿ ಸ್ಪರ್ಧೆ: ಡಾ.ಸುಮಂತ್ ಬಳಗಂಡಿ ಝೋನಲ್ ಲೆವೆಲ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಕುಮಟಾ: ಕಳೆದ ಫೆಬ್ರುವರಿ 2024 ರಲ್ಲಿ ನಡೆದ ‘TYSA ನ್ಯೂರೊಲೋಜಿ’ ಪರೀಕ್ಷಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ‘ಪ್ರಥಮ ಸ್ಥಾನ’ಪಡೆದ ಡಾ.ಸುಮಂತ್ ಜಯದೇವ ಬಳಗಂಡಿ ( Dr. Sumant jayadev balagandi) ಅವರು ಮಾರ್ಚ್ 17 ರಂದು ಜರುಗಿದ ದಕ್ಷಿಣ ಭಾರತದ ಎಂಟು ರಾಜ್ಯಗಳನ್ನೊಳಗೊಂಡ “ಝೋನಲ್ ಲೆವೆಲ್” ನಲ್ಲಿ ಸ್ಪರ್ಧಿಸಿ ‘ಪ್ರಥಮ ಸ್ಥಾನ’ ಗಳಿಸಿರುತ್ತಾರೆ.

‘ಝೋನಲ್ ಲೆವೆಲ್’ ನಲ್ಲಿ ‘ಪ್ರಥಮ ಸ್ಥಾನ’ ಗಳಿಸಿದ್ದರಿಂದ ಎಪ್ರಿಲ್ 2024 ರಲ್ಲಿ ಅಹ್ಮದಾಬಾದ್ ನಲ್ಲಿ ಜರುಗಲಿರುವ ರಾಷ್ಟ್ರ ಮಟ್ಟದ ಪರೀಕ್ಷಾ ಸ್ಪರ್ಧೆಯಲ್ಲಿ ಭಾಗವಹಿಸಲು ಡಾ.ಸುಮಂತ್ ಬಳಗಂಡಿ ಅವರು ಅರ್ಹತೆ ಪಡೆದಂತಾಗಿದೆ. ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಙಾನ ಸಂಸ್ಥೆ (NIMHANS)ನಲ್ಲಿ ಡಿ.ಎಮ್.ನ್ಯೂರೊಲೋಜಿ ‘ಸೂಪರ್ ಸ್ಪೆಶಲೈಸೇಶನ್’ನ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ‘ಸೀನಿಯರ್ ರೆಸಿಡೆಂಟ್’ ಆಗಿರುವ ಡಾ.ಸುಮಂತ್ ಬಳಗಂಡಿ ಅವರನ್ನು ಗುರು ವೃಂದದವರು,ಕುಟುಂಬದವರು,
ಮಿತ್ರರು,ಹಿತೈಷಿಗಳು ಅಭಿನಂದಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಇವರು ಯಶಸ್ಸು ಸಾಧಿಸಲೆಂದು ಶುಭಹಾರೈಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button