Join Our

WhatsApp Group
Important
Trending

ಬಿಜೆಪಿ ಮುಖಂಡರಿದ್ದ ಕಾರಿಗೆ ಡಿಕ್ಕಿ ಹೊಡೆದ ಲಾರಿ:ಹೆದ್ದಾರಿ ಪಕ್ಕದಲ್ಲಿ ಉರುಳಿಬಿದ್ದ ಕಾರು

  • ಹೆದ್ದಾರಿ ಪಕ್ಕದಲ್ಲಿ ಉರುಳಿಬಿದ್ದ ಕಾರು
  • ಐವರಲ್ಲಿ ನಾಲ್ವರಿಗೆ ಗಾಯ

ಕುಮಟಾ: ಇನ್ನೋವಾ ಕಾರ್ ಹಾಗೂ ಲಾರಿ‌ ನಡುವೆ ಭೀಕರ ಅಪಘಾತ ನಡೆದು ಕಾರನಲ್ಲಿದ್ದ ಐವರಲ್ಲಿ ನಾಲ್ವರು ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಅಪಘಾತವಾದ ಕಾರುನ್ನು ಹೊನ್ನಾವರದ ಜಿ ಜಿ ಶಂಕರ ಚಲಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯ ಹಿರಿಯ ಮುಖಂಡ ಕುಮಟಾದ ವಿನೋಧ ಪ್ರಭು ಸೇರಿ ಬಿಜೆಪಿಯ ಐದು ಮಂದಿ ಯಲ್ಲಾಪುರದಿಂದ ಕುಮಟಾ ಕಡೆ ಪ್ರಯಾಣಿಸುತ್ತಿದ್ದ ವೇಳೆ ಕುಮಟಾ ಕಡೆಯಿಂದ ಅಂಕೋಲಾ‌ ಕಡೆ ಅತೀ ವೇಗವಾಗಿ ಚಲಾಯಿಸುತ್ತಿದ್ದ ಲಾರಿ, ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇನ್ನೋವಾ ಕಾರು ಹೆದ್ದಾರಿಯ ಪಕ್ಕದಲ್ಲಿ ಉರಿಳಿ ಬಿದ್ದಿದೆ. ಇದರಿಂದಾಗಿ ಕಾರಿನಲ್ಲಿದ್ದ‌ ನಾಲ್ವರಿಗೆ ಗಾಯಗಳಾಗಿವೆ. ಬಿಜೆಪಿಯ ಹಿರಿಯ ಮುಖಂಡ‌ರಾದ ವಿನೋಧ ಪ್ರಭು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಗೊಂಡವನ್ನು ಸ್ಥಳೀಯರು ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸಲಾಗಿದೆ.

ಸೇಪ್ ಸ್ಟಾರ್ ಗ್ರೂಪಿನ ಮ್ಯಾನೇಂಜಿಂಗ್ ಡೈರೆಕ್ಟರ್ ಮತ್ತು ಇತ್ತಿಚೆಗೆ ನಡೆದ ಗ್ರಾಮ‌ಪಂಚಾಯತ್ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದ ಹೊನ್ನಾವರದ ಜಿ ಜಿ ಶಂಕರ ಅವರಿಗೆ ತೀವ್ರ ಗಾಯವಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button