ನೇಣುಬಿಗಿದುಕೊಂಡು ಸಾವಿಗೆ ಶರಣಾದ ವ್ಯಕ್ತಿ

ಶಿರಸಿ: ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ನಗರದ ಕರಿಗುಂಡಿ ರಸ್ತೆಯ ನೆಹರು ನಗರದಲ್ಲಿ ನಡೆದಿದೆ. ನೆಹರು ನಗರದ ರಾಮಕೃಷ್ಣ ರಂಗನಾಥ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಮೊದಲಿನಿಂದಲೂ ವಿಪರೀತ ಸರಾಯಿ ಕುಡಿತದ ಚಟ ಹೊಂದಿದ್ದು, ಬೆಂಗಳೂರು ನಾಗರಭಾವಿಯ ಶೆಟ್ಟಿಸ್ ಕಿಚನ್ ಎಂಬ ಹೋಟೆಲ್‌ನಲ್ಲಿ ಅಡುಗೆ ಮಾಡುವ ಕೆಲಸ ಮಾಡಿಕೊಂಡಿದ್ದ.

ತಿಂಗಳಿಗೆ ಒಂದೆರಡು ಬಾರಿ ಊರಿಗೆ ಬಂದು ಹೋಗಿ ಮಾಡುತ್ತಿದ್ದ. ಮಾರ್ಚ್ 20ರಂದು ಶಿರಸಿ ಜಾತ್ರೆಗೆ ಊರಿಗೆ ಬಂದು ಸರಾಯಿ ಕುಡಿದು ಜಗಳ ಮಾಡಿಕೊಂಡು ಮನೆಯ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version